ETV Bharat / state

ಡಿಸಿ ಆದ್ರೂ ಕೃಷಿಯತ್ತ ಬಿಡದ ತುಡಿತ​.. ಸಾವಯವ ಜಿಲ್ಲಾಧಿಕಾರಿಯಿಂದ ಯುವಕರಿಗೆ ಉತ್ತೇಜನ, ಸ್ಫೂರ್ತಿ!

ವೃತ್ತಿಯಿಂದ ಜಿಲ್ಲಾಧಿಕಾರಿಯಾದ್ರೂ ಕೃಷಿಯೇ ಇವರ ಹವ್ಯಾಸ. ತಾವೊಬ್ಬ ಐಎಎಸ್​ ಅಧಿಕಾರಿ ಎಂಬ ಬಿಗುಮಾನ ತೋರಲ್ಲ. ತಮ್ಮ ಬಂಗ್ಲೆಯ ಸುತ್ತಲೂ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಇತರರಿಗೂ ಪ್ರೇರಣೆಯಾಗ್ತಿದ್ದಾರೆ..

ಡಿಸಿ ಆದ್ರೂ ಕೃಷಿಯತ್ತ ತುಡಿತ​
ಡಿಸಿ ಆದ್ರೂ ಕೃಷಿಯತ್ತ ತುಡಿತ​
author img

By

Published : Mar 23, 2021, 8:14 PM IST

ಉಡುಪಿ : ಟೀ ಶರ್ಟ್ ಧರಿಸಿ, ಲುಂಗಿ ಕಟ್ಕೊಂಡು ತರಕಾರಿ ಗಿಡದ ಮಧ್ಯೆ ಕಳೆ ಕೀಳುತ್ತಾ ಅಪ್ಪಟ ರೈತರಂತಿರೋದು ಉಡುಪಿ ಜಿಲ್ಲಾಧಿಕಾರಿಗಳಿಗೆ ಬಲು ಅಚ್ಚುಮೆಚ್ಚು. ಹವ್ಯಾಸಿ ಕೃಷಿಕರಾಗಿರುವ ಜಿ. ಜಗದೀಶ್ ಅವರು ತಮ್ಮ ಕಚೇರಿಯ ಒತ್ತಡದ ಕೆಲಸದ ನಡುವೆಯೇ ತರಕಾರಿ ಕೃಷಿ ಮಾಡೋದು ಅಂದ್ರೆ ಪಂಚಪ್ರಾಣ. ಹೀಗಾಗಿ, ತಮ್ಮ ಬಂಗ್ಲೆಯ ಸುತ್ತಲೂ ಇವರು ಹೂವಿನ ಗಿಡಗಳ ಮಧ್ಯೆಯೇ ತರಕಾರಿಗಳನ್ನು ಬೆಳೆದಿದ್ದಾರೆ.

ಡಿಸಿ ಆದ್ರೂ ಕೃಷಿಯತ್ತ ತುಡಿತ

ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತೊಂಡೆ, ಬೆಂಡೆ, ಟೊಮ್ಯಾಟೊ, ಬಸಳೆ ಸೇರಿ ನಾನಾ ತರಕಾರಿಗಳನ್ನು ಬೆಳೆದಿದ್ದಾರೆ. ಇವರು ಸಾವಯವ ಕೃಷಿ ಮಾಡುತ್ತಿರೋದು ಮತ್ತೊಂದು ವಿಶೇಷ. ಕೃಷಿ ಕುಟುಂಬದಿಂದ ಬಂದ ಇವರು, ಶಾಲಾ ದಿನಗಳಲ್ಲಿ ಕೃಷಿ ಕೆಲಸಗಳನ್ನು ಮುಗಿಸಿ ಶಾಲೆಗೆ ತೆರಳುತ್ತಿದ್ದರಂತೆ.

ಹೀಗಾಗಿ, ಇವರು ಉಡುಪಿಗೆ ಬಂದಾಗಿನಿಂದ ತಮ್ಮನ್ನು ತಾವು ಕೃಷಿಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಓದಿ:ಆಗುಂಬೆ ಘಾಟಿಯಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಸ್ವಚ್ಛತಾ ಕಾರ್ಯ!

ಇಷ್ಟೇ ಅಲ್ಲ, ಎರಡು ಜೇನುಗೂಡುಗಳನ್ನು ಇಟ್ಟು ಜೇನು ಕೃಷಿ ಸಹ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಈ ಕೃಷಿ ಬಗೆಗಿನ ಹವ್ಯಾಸ ಇತರರಿಗೂ ಮಾದರಿಯಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.