ಉಡುಪಿ : ಕೋವಿಡ್ ಕಷ್ಟದ ಕಾಲದಲ್ಲಿ ಆಟೋ ಚಾಲಕರು ವಿಶೇಷ ಸೇವೆ ಮೂಲಕ ನೆರವಿಗೆ ಧಾವಿಸಿದ್ದು, ಮಾದರಿಯಾಗಿದ್ದಾರೆ. ಉಡುಪಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ಯ ಮತ್ತವರ ತಂಡ ರೋಗಿಗಳು, ಹಿರಿಯ ನಾಗರಿಕರಿಗೆ ಉಚಿತ ಆಟೋ ಸೇವೆ ನೀಡಲು ಮುಂದೆ ಬಂದಿದ್ದಾರೆ.
ಉಚಿತ ತುರ್ತು ಸೇವೆಗಾಗಿ 37 ರಿಕ್ಷಾ ಚಾಲಕರ ತಂಡ ಉಡುಪಿಯಲ್ಲಿ ಸಿದ್ದವಾಗಿದ್ದು, ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಸೇವೆ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ವೇಳೆ ಮನೆಯಲ್ಲಿ ಯಾರಾದರೂ ಆನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ಕರೆದೊಯ್ಯುವುದು ಸವಾಲಾಗಿದೆ. ಈ ಹಿನ್ನೆಲೆ ಆಟೋ ಚಾಲಕರು ಈ ರೀತಿಯ ಸೇವೆ ನೀಡಲು ಮುಂದೆ ಬಂದಿದ್ದಾರೆ.
ಸದ್ಯ 37 ಆಟೋ ಚಾಲಕರು ಈ ಉತ್ತಮ ಸೇವೆಗೆ ಮುಂದೆ ಬಂದಿದ್ದು, ದಿನದ 24 ಗಂಟೆಯೂ ಸೇವೆ ನೀಡಲು ಚಾಲಕರ ತಂಡ ಸಿದ್ಧವಾಗಿದೆ. ಆಟೋ ಚಾಲಕರ ಈ ಸಮಾಜ ಸೇವೆಗೆ ಜಿಲ್ಲಾಡಳಿತ ಕೂಡ ಬೆಂಬಲ ನೀಡಿದೆ.
ಮೊದಲೇ ದುಡಿಮೆ ಇಲ್ಲದೆ ಕೈ ಸುಟ್ಟುಕೊಂಡಿರುವ ಆಟೋಚಾಲಕರು ಇದೀಗ ಉಚಿತ ಸೇವೆಗೆ ಮುಂದಾಗಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ ಆಟೋಚಾಲಕರ ಕಾರ್ಯಕ್ಕೆ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಶಹಾಬಾದ್ ಇಎಸ್‌ಐ ಆಸ್ಪತ್ರೆಗೆ ಮರುಜೀವ.. ಆಧುನಿಕ ಸ್ಪರ್ಶದೊಂದಿಗೆ ಸಿಸಿ ಸೆಂಟರ್ ಆಗಿ ಪರಿವರ್ತನೆ