ETV Bharat / state

ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಂಟೈನರ್​ ಚಾಲನೆ: ಚಾಲಕ ಪೊಲೀಸ್​ ವಶಕ್ಕೆ - ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಂಟೈನರ್​ ಚಾಲನೆ

ಉಡುಪಿ ಜಿಲ್ಲೆಯ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಚಾಲಕ ಕಂಟೈನರ್​ ಅನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿರುವ ಘಟನೆ ನಡೆದಿದೆ.

Drunk and drive case in Kundapura
ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಂಟೈನರ್​ ಚಾಲನೆ
author img

By

Published : Sep 19, 2021, 9:26 PM IST

ಉಡುಪಿ: ಚಾಲಕನೋರ್ವ ಮದ್ಯಪಾನ ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಂಟೈನರ್​ ಅನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಂಟೈನರ್​ ಚಾಲನೆ

ಎಣ್ಣೆ ನಶೆಯಲ್ಲಿದ್ದ ಚಾಲಕ ಯದ್ವಾತದ್ವಾ ಚಾಲನೆ ಮಾಡಿದ್ದು, ಮುಳ್ಳಿಕಟ್ಟೆಯಲ್ಲಿ ಹಾಕಿದ್ದ ಬ್ಯಾರಿಕೇಡ್​ ಅನ್ನು 4 ಕಿಮೀ ದೂರದವರೆಗೆ ಎಳೆದುಕೊಂಡು ಹೋಗಿ ಬಳಿಕ ಅರಾಟೆ ಸೇತುವೆ ತಡೆಗೋಡೆಗೆ ಕಂಟೈನರ್​ ಡಿಕ್ಕಿ ಹೊಡೆದಿದೆ.

ಹೆಮ್ಮಾಡಿ ಬಳಿ ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಕಂಟೈನರ್ ಗಾಜಿಗೆ ಕಲ್ಲೆಸೆದು ನಿಲ್ಲಿಸಿ ಚಾಲಕನನ್ನು ಕುಂದಾಪುರ ಸಂಚಾರಿ ಪೊಲೀಸರಿಗೊಪ್ಪಿಸಿದ್ದಾರೆ. ಈ ವೇಳೆ ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದರು. ಛತ್ತೀಸ್​ಗಢ ರಾಜ್ಯದ ನೋಂದಣಿಯ ಕಂಟೈನರ್​ನಲ್ಲಿ ಕುರುಚಲು ಹುಲ್ಲು ಸಾಗಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: 'ವಿಡಿಯೋದಲ್ಲಿರುವುದು ನಾನಲ್ಲ, ವಿರೋಧಿಗಳು ನಿಷ್ಪಕ್ಷಪಾತ ವ್ಯಕ್ತಿತ್ವ ಹಾಳು ಮಾಡಲು ಇದನ್ನು ನಿರ್ಮಿಸಿದ್ದಾರೆ': ಡಿವಿಎಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.