ಭಟ್ಕಳ: ಶೋಟೋಕಾನ್ ಕರಾಟೆ ಇನ್ಸ್ಟಿಟ್ಯೂಟ್ ಭಟ್ಕಳ ಅವರ ಆಶ್ರಯದಲ್ಲಿ ಇಲ್ಲಿನ ಕಮಲಾವತಿ ರಾಮನಾಥ ಶ್ಯಾನಭಾಗ್ ಸಭಾಂಗಣದಲ್ಲಿ ಕರಾಟೆ ಬ್ಲ್ಯಾಕ್ ಬೆಲ್ಟ್ ಮತ್ತು ಪದವಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುರು ಸುಧೀಂದ್ರ ಅವರು ಶಾಲಾ ಅಂಕಣಗಳ ಹಿಂದೆ ಹೋಗಿ ಸುಸ್ತಾಗುವ ವರ್ತಮಾನದಲ್ಲಿ, ಕರಾಟೆ ಕಲೆ ನಮ್ಮಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತದೆ. ಇದು ಸದೃಢ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಇಂದು ಟಿವಿ ಮಾಧ್ಯಮಗಳು ಹೀರೋಗಳನ್ನು ಸೃಷ್ಟಿಸುವ ಪರಿಪಾಠ ಬೆಳೆಯುತ್ತಿದೆ. ಇದರಿಂದ ನಿರಂತರ ಸಾಧನೆ ಪರಿಶ್ರಮಗಳಿಗೆ ಬೆಲೆ ಇಲ್ಲ ಎಂಬ ಭಾವನೆ ಬೆಳೆಯುತ್ತಿದೆ. ಕೇವಲ ಗಿಮಿಕ್ಗಳಿಂದ ಯಾವುದೇ ಸಾಧಕ ಹುಟ್ಟಿಕೊಳ್ಳಲಾರ. ಅದು ಕ್ಷಣಿಕವಾಗಿದ್ದು, ನಿರಂತರ ಪ್ರಯತ್ನ ಪರಿಶ್ರಮಗಳು ಮಾತ್ರ ನಿಜವಾದ ಹೀರೋಗಳನ್ನ ರೂಪಿಸುತ್ತವೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಕರಾಟೆ ತರಬೇತುದಾರ ರಾಜನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹೇಶ ನಾಯ್ಕ, ಯೋಗೇಶ ನಾಯ್ಕ, ವಿಕೀತ್ ನಾಯ್ಕ, ಹರ್ಷ ಮೊಗೇರ್, ತೇಜಸ್ಚಿನಿ ಮೊಗೇರ್, ಪೃಥ್ವಿರಾಜ ನಾಯ್ಕ, ಮೊಹಮ್ಮದ್ ಇಸ್ಮಾಯಿಲ್, ಆದಿತ್ಯ ಟಿ, ಭರಣಿ ಆದಿದ್ರಾವಿಡ, ಅರ್ಥಾ ಜಾನ್, ಜಯಶನ್, ಉಜೈರ್, ಮೋಹನ ನಾಯ್ಕ, ನಾಗಶ್ರೀ ನಾಯ್ಕ, ಅಶೋಕ ನಾಯ್ಕ, ಮನೋಜ ನಾಯ್ಕ, ಕಾವ್ಯ ವೈದ್ಯ, ಅಮರ್ ಶಾ, ಸಂತೋಷ ಆಚಾರಿ, ಡಿ. ಪ್ರದೀಪ್, ಚಂದ್ರು ನಾಯ್ಕ, ರಾಜಶೇಖರ ಗೌಡ. ಯಮ್ ಕಾರವಾರ, ಸುರೇಶ ಮೊಗೇರ್, ಉಮೇಶ ಮೊಗೇರ್ ಕರಾಟೆ ಪಟುಗಳಿಗೆ ಬ್ಲ್ಯಾಕ್ ಬೆಲ್ಟ್ ಮತ್ತು ಪದವಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.