ಶಿವಮೊಗ್ಗ: ಸುಳ್ಯದ ಪ್ರವೀಣ್ ನೆಟ್ವಾರು ಕೊಲೆ ಖಂಡಿಸಿ ಸಾಗರದ 29ನೇ ವಾರ್ಡ್ನ ಬಿಜೆಪಿಯ ಬೂತ್ ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 29ನೇ ವಾರ್ಡ್ನ ಅಧ್ಯಕ್ಷರಾದ ಪ್ರವೀಣ್ ಪೂಜಾರಿ, ಉಪಾಧ್ಯಕ್ಷ ಸಂದೇಶ್ ರೇವಣಕರ್ ಕಾರ್ಯದರ್ಶಿ ರಾಹುಲ್ ಪೂಜಾರಿ ತಮ್ಮ ಹುದ್ದೆಯ ಜೊತೆಗೆ ಬಿಜೆಪಿ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಸೈದ್ದಾಂತಿಕ ವಿಚಾರದಾರೆಗಳಿಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದರಿಂದ ಕಾರ್ಯಕರ್ತರಿಗೆ ನೋವಾಗುತ್ತದೆ. ಪ್ರವೀಣ್ ನೆಟ್ವಾರು ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿ ಸೇವೆಗೋಸ್ಕರ ತೊಡಗಿಸಿಕೊಂಡಿದ್ದ ಹುಡುಗ, ಇಂದು ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ.
ಬಿಜೆಪಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಮಾತಿಗೆ ಬೇಸತ್ತು, ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಸಾಗರ ಬಿಜೆಪಿಯ 29 ನೇ ವಾರ್ಡ್ನ ಪಾಧಿಕಾರಿಗಳು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಉಡುಪಿಯಲ್ಲೂ ಮುಂದುವರೆದ ರಾಜೀನಾಮೆ ಪರ್ವ: ಉಡುಪಿಯ ಬೈಲಕೆರೆ ವಾರ್ಡ್ನಲ್ಲಿ ಏಳು ಜನ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಆಡಳಿತದ ರಾಜ್ಯ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ಅಸುರಕ್ಷತೆ ಮತ್ತು ಪ್ರವೀಣ್ ಹತ್ಯೆ ಮನಸ್ಸಿಗೆ ನೋವುಂಟು ಮಾಡಿದೆ. ಹಿಂದೂ ಕಾರ್ಯಕರ್ತರ ಸುರಕ್ಷತೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದು ಹೋಗಿದೆ.
ಇದು ನಮ್ಮ ವೈಯಕ್ತಿಕ ನಿರ್ಧಾರವಾಗಿದೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಿಮುಕ್ತ ಮಾಡಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Praveen Murder case.. ಇಬ್ಬರು ಆರೋಪಿಗಳ ಬಂಧನ... ಮಂಗಳೂರಿಗೆ ಇಂದು ಸಿಎಂ
ಬಿಜೆಪಿ ಕೋಟ ಯುವಮೋರ್ಚ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜೀನಾಮೆ ಘೋಷಿಸಿದ್ದಾರೆ. ಸಚಿವ ಶ್ರೀನಿವಾಸ ಪೂಜಾರಿಯವರ ಕ್ಷೇತ್ರದಲ್ಲಿ ಯುವ ಸಂಘಟಕ, ಕೋಟ ಯುವಮೋರ್ಚಾ ಅಧ್ಯಕ್ಷ ಕೊಲೆ ವಿಚಾರದಲ್ಲಿ ಮನನೊಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.