ETV Bharat / state

ಉಡುಪಿ ಕೃಷ್ಣ ಮಠ ಪರ್ಯಾಯಕ್ಕೆ ಐನೂರು ವರ್ಷಗಳ ಸಂಭ್ರಮ - Udupi Krishna Math

ನಾಳೆ ಅಷ್ಟ ಮಠಗಳ ನಡುವೆ ನಡೆಯುವ ಪರ್ಯಾಯಕ್ಕೆ ನಾಳೆ ಐನೂರು ವರ್ಷಗಳ ಸಂಭ್ರಮಕ್ಕೆ ಸಾಕ್ಷಿಯಾಗಲು ಸಿಎಂ ಬಿಎಸ್​ ಯಡಿಯೂರಪ್ಪ ಉಡುಪಿಗೆ ಆಗಮಿಸುತ್ತಿದ್ದಾರೆ.

dsd
ನಾಳೆ ಉಡುಪಿಗೆ ಬಿಎಸ್​ವೈ
author img

By

Published : Jan 17, 2021, 9:06 PM IST

ಉಡುಪಿ: ಕೃಷ್ಣಮಠದಲ್ಲಿ ಪರ್ಯಾಯ ಎಂಬುವುದು ಅದ್ಬುತ ಆಡಳಿತ ವ್ಯವಸ್ಥೆ. ಅಷ್ಟ ಮಠಗಳ ನಡುವೆ ನಡೆಯುವ ಪರ್ಯಾಯಕ್ಕೆ ನಾಳೆ ಐನೂರು ವರ್ಷಗಳ ಸಂಭ್ರಮ. ಈ ಸಂಭ್ರಮದ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಗರಕ್ಕೆ ಆಗಮಿಸುತ್ತಿದ್ದಾರೆ.

ನಾಳೆ ಉಡುಪಿಗೆ ಬಿಎಸ್​ವೈ

ಅಧಿಕಾರಕ್ಕಾಗಿ ನಡೆಯುವ ನಾನಾ ಕಚ್ಚಾಟಗಳನ್ನು ನೋಡುತ್ತೇವೆ. ಆದರೆ ಕೃಷ್ಣ ಮಠದ ಅಧಿಕಾರ ಶಿಸ್ತುಬದ್ಧವಾಗಿ ಹಸ್ತಾಂತರವಾಗುತ್ತ ಬಂದಿದೆ. ಒಂದಲ್ಲ ಎರಡಲ್ಲ ನೂರಾರು ವರ್ಷಗಳಿಂದ ಈ ಶಿಸ್ತು ಪಾಲನೆಯಾಗುತ್ತಿದೆ. ಕೃಷ್ಣಮಠದಲ್ಲಿ ಕಳೆದ ಎಂಟು ಶತಮಾನಗಳಿಂದ ಒಬ್ಬ ಯತಿಯೂ ಅಧಿಕಾರ ಬಿಟ್ಟು ಕೊಡೋದಿಲ್ಲ ಎಂದು ಬಂಡಾಯವೆದ್ದಿಲ್ಲ. ಪರ್ಯಾಯ ಮಹೋತ್ಸವ ಎಂದು ಕರೆಯಲಾಗುವ ಈ ಆಡಳಿತ ಹಸ್ತಾಂತರ ಒಂದು ಸಾಂಪ್ರದಾಯಿಕ ಮಾದರಿ ಆಚರಣೆ. ಆರಂಭದಲ್ಲಿ ಎರಡು ತಿಂಗಳಿಗೊಮ್ಮೆ ಅಷ್ಟ ಮಠಗಳ ನಡುವೆ ಪರ್ಯಾಯ ಮಹೋತ್ಸವ ನಡೆಯುತ್ತಿತ್ತು. ಆದರೆ ನಂತರ ದಿನಗಳಲ್ಲಿ ಎರಡು ವರ್ಷಗಳಿಗೊಮ್ಮೆ ಪರ್ಯಾಯ ನಡೆಯಿತು.

ಸದ್ಯ ಎರಡು ವರ್ಷಗಳ ಪರ್ಯಾಯ ಆರಂಭವಾಗಿ 500 ವರ್ಷಗಳಾಗಿದ್ದು, ಈ ಹಿನ್ನೆಲೆ ಕೃಷ್ಣ ಮಠದಲ್ಲಿ ಎಂಟು ಮಠಗಳ ಇತಿಹಾಸ ತಿಳಿಸುವ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾವಯವ ಮಳಿಗೆಗೆ ಉದ್ಘಾಟನೆ ನಡೆಯಲಿದೆ. ಸಂಜೆ 4.30 ಕ್ಕೆ ಆಗಮಿಸಲಿರುವ ಸಿಎಂ, ಐದು ಗಂಟೆಗೆ ಪರ್ಯಾಯದ ಪಂಚ ಶತಮಾನೋತ್ಸವದಲ್ಲಿ ಭಾಗವಹಿಸಲಿದ್ದಾರೆ. 6.30ಕ್ಕೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ನಗರದಲ್ಲಿ ತಂಗಲಿದ್ದು,19 ರಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಹೆಜಮಾಡಿಯಲ್ಲಿರುವ ಮೀನುಗಾರಿಕಾ ಬಂದರು ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.