ETV Bharat / state

ಉಡುಪಿ: ಗಾಳಿ, ಮಳೆಗೆ ಮಗುಚಿಬಿದ್ದ ದೋಣಿ; ಮೂವರು ಮೀನುಗಾರರ ರಕ್ಷಣೆ - ಮಳೆ, ಗಾಳಿಗೆ ಮಗುಚಿಬಿದ್ದ ದೋಣಿ

ಕಂಚುಗೋಡು ಸಮೀಪದ ಕಡಲಿಗೆ ಮುಂಜಾನೆ ದೋಣಿಯೊಂದು ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಗಾಳಿ ಮಳೆಗೆ ದೋಣಿ ಮಗುಚಿ ಬಿದ್ದಿದೆ.

:Three fishermen rescued in Udupi
ಮೂವರು ಮೀನುಗಾರರ ರಕ್ಷಣೆ
author img

By

Published : Sep 5, 2021, 6:40 PM IST

ಉಡುಪಿ: ಗಾಳಿಸಹಿತ ಭಾರಿ ಮಳೆಗೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಮಗುಚಿಬಿದ್ದಿತ್ತು. ಇದರಲ್ಲಿದ್ದ ಮೂವರು ಮೀನುಗಾರರನನ್ನು ಕಂಚುಗೋಡು ಸಮೀಪದ ಕಡಲಿನಲ್ಲಿ ರಕ್ಷಿಸಲಾಗಿದೆ.

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (65), ನಾಗರಾಜ ಖಾರ್ವಿ (38) ಮತ್ತು ವಿನಯ ಖಾರ್ವಿ (30) ಪ್ರಾಣಾಪಾಯದಿಂದ ಪಾರಾದ ಮೀನುಗಾರರು.

ಈ ಮೂವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಭಾರಿ ಗಾಳಿ, ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿ ಕಂಚುಗೋಡು ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿತು. ಈ ವಿಷಯ ತಿಳಿದು ಕೂಡಲೇ ಸಮೀಪದಲ್ಲಿದ್ದ ದೋಣಿಗಳಲ್ಲಿದ್ದವರು ಮೂವರನ್ನು ರಕ್ಷಿಸಿ ದಡ ಸೇರಿಸಿದ್ದಾರೆ.

ದೋಣಿಯಲ್ಲಿದ್ದ ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಮುಳುಗಿ 4.5ಲಕ್ಷ ರೂ. ನಷ್ಟವಾಗಿದೆ ಎಂದು ವಿನಯ ಖಾರ್ವಿ ಕರಾವಳಿ ಕಾವಲು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಎರಡು ವರ್ಷಗಳ ನಂತರ ಶಾಲೆಗೆ ಹೋಗುವ ಭಾಗ್ಯ ; ಸ್ಯಾನಿಟೈಸ್​ಗೆ ಮುಂದಾದ ಶಾಲೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.