ETV Bharat / state

ರಾಮ ದೇವರನ್ನು ಕೊಂಡೊಯ್ಯುವ ರಥ ಉಡುಪಿಯಲ್ಲಿ ನಿರ್ಮಾಣವಾಗುತ್ತಿಲ್ಲ: ಚಂಪತ್ ರಾಯ್

ರಾಮ ಮಂದಿರ ನಿರ್ಮಾಣದ ವೇಳೆ ರಾಮ ದೇವರನ್ನು ಕೊಂಡೊಯ್ಯುವ ರಥ ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಸಂಗತಿಯನ್ನು ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ನವರು ಸಂಪೂರ್ಣ ನಿರಾಕರಿಸಿದ್ದಾರೆ.

udupi
ಉಡುಪಿ
author img

By

Published : May 16, 2021, 12:15 PM IST

ಉಡುಪಿ: ಅಯೋಧ್ಯೆಗೂ ಉಡುಪಿಗೂ ಎಲ್ಲಿಲ್ಲದ ನಂಟು. ಪೇಜಾವರ ಶ್ರೀಗಳ ಕಾಲದಿಂದ ಅಯೋಧ್ಯಾ ರಾಮ ಮಂದಿರ ಹೋರಾಟದಲ್ಲಿ ಉಡುಪಿ ಸಕ್ರಿಯವಾಗಿತ್ತು.

ಇದೀಗ ರಾಮ ಮಂದಿರ ನಿರ್ಮಾಣದ ವೇಳೆ ರಾಮ ದೇವರನ್ನು ಕೊಂಡೊಯ್ಯುವ ರಥ ಉಡುಪಿಯಲ್ಲಿ ನಿರ್ಮಾಣವಾಗುತ್ತದೆ ಎಂದು ಭಾವಿಸಲಾಗಿತ್ತು. ಕುಂದಾಪುರ ಸಮೀಪದ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಇದಕ್ಕಾಗಿ ತಯಾರಿ ಕೂಡ ಆರಂಭಿಸಿದ್ದರು. ಅಂಜನಾದ್ರಿ ಸ್ವಾಮೀಜಿಯವರ ಆದೇಶದಂತೆ ನಿರ್ಮಾಣಕ್ಕೆ ಶುಕ್ರವಾರ ಅಂದರೆ ಅಕ್ಷಯ ತೃತೀಯಾ ದಿನ ಚಾಲನೆ ಕೂಡ ನೀಡಿದ್ದರು.

udupi
ಪೇಜಾವರ ಶ್ರೀಗಳಿಗೆ ಲಿಖಿತ ಹೇಳಿಕೆ ಕಳುಹಿಸಿರುವ ಚಂಪತ್ ರಾಯ್

ಆದರೆ ಉಡುಪಿಯಲ್ಲಿ ರಥ ನಿರ್ಮಾಣವಾಗುತ್ತಿರುವ ಸಂಗತಿಯನ್ನು ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ನವರು ಸಂಪೂರ್ಣ ನಿರಾಕರಿಸಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ರಥ ನಿರ್ಮಿಸುವ ಕುರಿತು ಟ್ರಸ್ಟ್​​ನಲ್ಲಿ ಯಾವುದೇ ನಿರ್ಣಯ ಆಗಿಲ್ಲ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪೇಜಾವರ ಶ್ರೀಗಳಿಗೆ ಲಿಖಿತ ಹೇಳಿಕೆ ಕಳುಹಿಸಿರುವ ಅವರು, ಟ್ರಸ್ಟ್​​ನ ಮೂಲಕ ರಥ ನಿರ್ಮಿಸುವ ಕುರಿತಾಗಿಯಾಗಲಿ ಅಥವಾ ಯಾವುದೇ ದಾನಿಗಳು ರಥ ನಿರ್ಮಿಸುವ ಬಗ್ಗೆಯಾಗಲಿ ನಮ್ಮ ಮುಂದೆ ಮನವಿ ಸಲ್ಲಿಸಿಲ್ಲ. ನಮ್ಮ ಮುಂದೆ ಪ್ರಸ್ತುತ ಭವ್ಯ ಮಂದಿರ ನಿರ್ಮಾಣದ ಅಜೆಂಡಾ ಮಾತ್ರ ಇದೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.

ಓದಿ: ರಾಮಲಲ್ಲಾನನ್ನು ಹೊತ್ತೊಯ್ಯುವ ರಥ ಉಡುಪಿಯಲ್ಲಿ ತಯಾರಾಗುತ್ತಾ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.