ಕಾರ್ಕಳ: ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕದ ನಡುವೆ ಇದೀಗ ಕಾರ್ಕಳದ ನಗರದಲ್ಲಿ ರಕ್ಕಸ ಮಿಡತೆಯನ್ನೇ ಹೋಲುವ ಮಿಡತೆಯೊಂದು ಪುರಸಭೆ ಕಸಬಾ ಗ್ರಾಮದ ಹವಾಲ್ದಾರ್ ಬೆಟ್ಟು ಪ್ರದೇಶದಲ್ಲಿ ಕಂಡು ಬಂದಿದೆ.
ಈ ಮಿಡತೆ ಕಂದು ಮಿಶ್ರಿತ ಬಣ್ಣದಿಂದ ಕೂಡಿದ್ದು, ಅದರ ಮೇಲ್ಮೈ ಒಣಗಿದ ಪೇರಳೆ ಗಿಡದ ಎಲೆಯ ರೂಪದಲ್ಲಿ ಇದೆ. ಈ ಮಿಡತೆಯ ಬಣ್ಣ, ಗಾತ್ರ ಹಾಗೂ ಹಾರಾಟ ನೋಡಿ ಜನರು ಭಯಭೀತರಾಗಿದ್ದಾರೆ.
![demon grasshopper](https://etvbharatimages.akamaized.net/etvbharat/prod-images/kn-udp-01-28-rakkasa-keetta-kac10029_28052020085229_2805f_1590636149_907.jpg)
ಇಂತಹ ಮಿಡತೆ ಈ ಭಾಗದಲ್ಲಿ ಎಂದೂ ಕಂಡಿಲ್ಲ. ಇದೇ ಮೊದಲ ಬಾರಿಗೆ ಈ ವಿಚಿತ್ರ ಮಿಡತೆಯನ್ನು ಕಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.