ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ಕೊಳಲಗಿರಿ ಗೇರುಬೀಜ ಫ್ಯಾಕ್ಟರಿ ಬಳಿಯ ಖಾಸಗಿ ಸ್ಥಳದಲ್ಲಿ ಮಂಗನ ಕಳೆಬರ ಪತ್ತೆಯಾಗಿದ್ದು, ಕೋತಿಯ ಸಾವಿನ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪಶು ವೈದ್ಯಾಧಿಕಾರಿಗಳು ಕೋತಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಾರದ ಹಿಂದೆಯಷ್ಟೇ ಈ ಜಾಗದಲ್ಲಿ ಕೋತಿಯ ಶವ ಪತ್ತೆಯಾಗಿದ್ದು, ಈಗ ಮತ್ತೊಂದು ಮಂಗ ಸತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷವೂ ಈ ಭಾಗದಲ್ಲಿ ಐದಾರು ಕೋತಿಗಳು ಸಾವನ್ನಪ್ಪಿದ್ದವು. ಯಾವುದಾದರೂ ಮಾರಕ ಕಾಯಿಲೆಯಿಂದ ಈ ಕೋತಿಗಳು ಸತ್ತಿದೆಯೋ ಅಥವಾ ಜನರ ಹಲ್ಲೆಯಿಂದ ಸಾವನ್ನಪ್ಪಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮಂಗನ ಕಾಯಿಲೆಯ ಭೀತಿ ಜನರನ್ನು ಕಾಡುತ್ತಿದೆ.