ETV Bharat / state

ಕಾರ್ಕಳ ಬಳಿ ಬಂಡೆಗೆ ಪ್ರವಾಸಿ ಬಸ್ ಡಿಕ್ಕಿ: 9 ಪ್ರಯಾಣಿಕರು ದುರ್ಮರಣ - ಉಡುಪಿಯಲ್ಲಿ ಪ್ರವಾಸಿ ಬಸ್​ ಅಪಘಾತ

ಕಾರ್ಕಳ ತಾಲೂಕಿನ ಮಾಳ ಬಳಿ ಭೀಕರ ಅಪಘಾತ. 9 ಜನ ಪ್ರವಾಸಿಗರು ದುರ್ಮರಣ. 27 ಮಂದಿಗೆ ಗಾಯ.

9-died-due-to-bus-accident-in-udupi
ಪ್ರವಾಸಿ ಬಸ್​ ಅಪಘಾತ: 9 ಪ್ರಯಾಣಿಕರ ಸಾವು
author img

By

Published : Feb 15, 2020, 8:44 PM IST

Updated : Feb 15, 2020, 11:33 PM IST

ಉಡುಪಿ: ಬಂಡೆಗೆ ಖಾಸಗಿ ಪ್ರವಾಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ‌ 9 ಪ್ರಯಾಣಿಕರು ಸಾವನ್ನಪ್ಪಿ, 27 ಮಂದಿ ಗಾಯಗೊಂಡಿದ್ದಾರೆ.

ಪ್ರವಾಸಿ ಬಸ್​ ಅಪಘಾತ: 9 ಪ್ರಯಾಣಿಕರ ಸಾವು

ಕಾರ್ಕಳ ತಾಲೂಕಿನ ಮಾಳ ಬಳಿ ಅಪಘಾತ ನಡೆದಿದ್ದು, ಮೈಸೂರು ಜಿಲ್ಲೆಯ ಟೂರಿಸ್ಟ್ ಬಸ್ ಇದಾಗಿದೆ. ಮೈಸೂರಿನಿಂದ ಮಂಗಳೂರಿಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಮೈಸೂರಿನ ವಿಠಲ್ ರೆಕಾರ್ಡ್ ಪ್ರೈ. ಲಿಮಿಟೆಡ್​ ಕಂಪನಿಯ ಸಿಬ್ಬಂದಿ ರಜೆ ಹಿನ್ನೆಲೆಯಲ್ಲಿ ಟ್ರಪ್​ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕಾರ್ಕಳ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಪಕ್ಕದ ಬಂಡೆಗೆ ಡಿಕ್ಕಿ ಹೊಡೆದು ಬಸ್ ನಜ್ಜುಗುಜ್ಜಾಗಿದೆ. ಎಸ್.ಕೆ.ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ ದುರಂತ ನಡೆದಿದೆ. ಬಸ್​ನಲ್ಲಿ 35 ಪ್ರವಾಸಿಗರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೃತರಲ್ಲಿ 6 ಜನ ಪುರುಷರು, ಮೂವರು ಮಹಿಳೆಯರಿದ್ದಾರೆ. ಶವಗಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

Last Updated : Feb 15, 2020, 11:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.