ಉಡುಪಿ : ಜಿಲ್ಲೆಯಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗಿದೆ. ಮಣಿಪಾಲದಲ್ಲಿ ಒಂದೇ ವಾರದಲ್ಲಿ 18 ಕೋವಿಡ್ ಪ್ರಕರಣ ದಾಖಲಾಗಿವೆ. ವಿದ್ಯಾರ್ಥಿಗಳಲ್ಲೇ ಅಧಿಕ ಪಾಸಿಟಿವ್ ಕೇಸ್ ದಾಖಲಾಗಿವೆ. ಮಣಿಪಾಲದ 9 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು, ರ್ಯಾಂಡಮ್ ಪರೀಕ್ಷೆಯಲ್ಲಿ ದೃಡಪಟ್ಟಿದೆ.
ಓರ್ವ ಎಂಐಟಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ, ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಆರೋಗ್ಯ ಇಲಾಖೆ ಒಳಪಡಿಸಿದೆ. ಪ್ರಾಥಮಿಕ ಸಂಪರ್ಕಿತ 9 ಮಂದಿಗೂ ಇದೀಗ ಸೋಂಕು ತಗುಲಿದೆ. ಕಾಲೇಜಿನ ಮತ್ತಷ್ಟು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತಿದೆ.
ಪಾಸಿಟಿವ್ ಬಂದ ವಿದ್ಯಾರ್ಥಿಗಳೆಲ್ಲ ಹೊರ ರಾಜ್ಯದವರಾಗಿದ್ದಾರೆ. ಪಾಸಿಟಿವ್ ಬಂದ 14 ಮಂದಿಯ ವರದಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಒಮಿಕ್ರಾನ್ ಶಂಕೆ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಆರೋಗ್ಯ ಇಲಾಖೆ ಬೆಂಗಳೂರಿಗೆ ಕಳುಹಿಸಿದೆ. ವಾರದ ಹಿಂದೆಯಷ್ಟೇ ವೃದ್ಧ ದಂಪತಿಗೆ ಒಮಿಕ್ರಾನ್ ಪತ್ತೆಯಾಗಿತ್ತು.
ಇದೀಗ ಒಂದೇ ಕಾಲೇಜಿನ 14 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಆತಂಕ ಹೆಚ್ಚಿದೆ. ಮಣಿಪಾಲ ಎಂಐಟಿ ಪರಿಸರವನ್ನು ಜಿಲ್ಲಾಡಳಿತ ಮೈಕ್ರೋ ಕಂಟೇನ್‌ಮೆಂಟ್ ಝೋನ್ ಮಾಡಿದೆ ಅಂತಾ ಡಿಹೆಚ್ಒ ಡಾ. ನಾಗಭೂಷಣ ಉಡುಪ ಮಾಹಿತಿ ನೀಡಿದ್ದಾರೆ.