ETV Bharat / state

ಉಡುಪಿ.. ಅತ್ಯಾಚಾರ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹60 ಸಾವಿರ ದಂಡ! - ಅತ್ಯಚಾರ ಅಪರಾಧಿಗೆ ಜೈಲು ಶಿಕ್ಷೆ

ಈ ಪ್ರಕರಣದ ಕುರಿತು ಸಂತ್ರಸ್ತೆ ಸಾಕ್ಷಿ ಹಾಗೂ ವೈದ್ಯಕೀಯ ವರದಿ ಸೇರಿ ಸುದೀರ್ಘ ವಾದ-ವಿವಾದ ಆಲಿಸಿದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ, ಈ ತೀರ್ಪು ಪ್ರಕಟಿಸಿದ್ದಾರೆ..

10-year-prison-punishment-for-rape-convict
ಅತ್ಯಚಾರ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, 60 ಸಾವಿರ ದಂಡ
author img

By

Published : Feb 3, 2021, 5:00 PM IST

ಉಡುಪಿ : 2005ರಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿ ಬಳಿಕ ಮದುವೆಗೆ ನಿರಾಕರಿಸಿದ್ದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 1 ವರ್ಷ ಸಜೆ ಮತ್ತು ₹10 ಸಾವಿರ ದಂಡ ವಿಧಿಸಲಾಗಿದೆ.

ಆರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಅತ್ಯಾಚಾರವೆಸಗಿದ ಅಪರಾಧಿ. 2005ರಲ್ಲಿ ಗಾರೆ ಕೆಲಸಕ್ಕೆಂದು ಯುವತಿ ಮನೆಗೆ ಬಂದಿದ್ದ ಪ್ರದೀಪ್ ನಾಯ್ಕ್, ಮದುವೆಯಾಗುವುದಾಗಿ ನಂಬಿಸಿ ಆಕೆ ಮೇಲೆ ಅತ್ಯಾಚಾರವೆಸಗಿದ್ದ. ಆ ಬಳಿಕ ಮದುವೆಗೆ ನಿರಾಕರಿಸಿದ್ದು, ಈ ಕುರಿತು ಸಂತ್ರಸ್ತೆ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಳು. ಆತನ ಬಂಧನವೂ ಆಗಿತ್ತು.

ಓದಿ: ಕಳ್ಳರು ಸಾರ್​ ಕಳ್ಳರು: ಕುಟುಂಬದ ತಾಯಿ, ಪುತ್ರ-ಪುತ್ರಿಯರು ಅಷ್ಟೇ ಯಾಕೆ ಸೊಸೆಯಂದಿರು ಕಳ್ಳರೇ!

ಈ ಪ್ರಕರಣದ ಕುರಿತು ಸಂತ್ರಸ್ತೆ ಸಾಕ್ಷಿ ಹಾಗೂ ವೈದ್ಯಕೀಯ ವರದಿ ಸೇರಿ ಸುದೀರ್ಘ ವಾದ-ವಿವಾದ ಆಲಿಸಿದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ, ಈ ತೀರ್ಪು ಪ್ರಕಟಿಸಿದ್ದಾರೆ. ದಂಡದ ಒಟ್ಟು 60 ಸಾವಿರ ಹಣದಲ್ಲಿ ₹50 ಸಾವಿರ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.