ETV Bharat / state

ತೆಂಗು, ಅಡಿಕೆ ಮರಗಳನ್ನು ಕಡಿದು ಹಾಕಿದ ಪ್ರಕರಣ.. ಗ್ರಾಮ ಲೆಕ್ಕಿಗ ಅಮಾನತು - ತುಮಕೂರು ತೆಂಗು, ಅಡಿಕೆ ಮರ ಕಡಿದ ಪ್ರಕರಣ

ಈ ಘಟನೆ ಕುರಿತಂತೆ ಉಪವಿಭಾಗಾಧಿಕಾರಿ ವರದಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗ ಮುರಳಿ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

village-accountant-suspended-
ಗ್ರಾಮ ಲೆಕ್ಕಿಗ ಅಮಾನತ್ತು
author img

By

Published : Mar 10, 2020, 7:16 PM IST

ತುಮಕೂರು : ವಿವಾದಿತ ಸ್ಥಳದಲ್ಲಿ ತೆಂಗು, ಅಡಿಕೆ ಮರಗಳನ್ನು ಕಡಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಿಗ ಮುರಳಿ ಎಂಬುವರನ್ನು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.

ಜಿಲ್ಲೆಯ ಗುಬ್ಬಿ ತಾಲೂಕು ತಿಪ್ಟೂರಿನಲ್ಲಿ ಶ್ರೀ ಉಡುಸಲಮ್ಮ ಜಾತ್ರೆ ಹಿನ್ನೆಲೆ ಮರಗಳನ್ನು ಕಡಿದು ಹಾಕಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಭಕ್ತಾದಿಗಳ ವಾಹನ ನಿಲುಗಡೆಗೆ ಸ್ಥಳಾವಕಾಶಕ್ಕಾಗಿ ಜಮೀನಿನಲ್ಲಿದ್ದ ಸಣ್ಣ ಗಿಡಗಳನ್ನು ತೆರವುಗೊಳಿಸಲು ಗುಬ್ಬಿ ತಹಸೀಲ್ದಾರ್ ಮಮತ ಮೌಖಿಕ ಆದೇಶ ನೀಡಿದ್ದರು. ಆದರೆ, ಗ್ರಾಮ ಲೆಕ್ಕಿಗ ಮುರಳಿ ತೆಂಗು, ಅಡಿಕೆ ಮರಗಳನ್ನು ಕಡಿದು ಹಾಕಿಸಿದ್ದರು.

ತೆಂಗು,ಅಡಿಕೆ ಮರಗಳನ್ನ ಕಡಿಸಿದ್ದ ಗ್ರಾಮ ಲೆಕ್ಕಿಗ ಅಮಾನತು..

ಈ ಘಟನೆ ಕುರಿತಂತೆ ಉಪವಿಭಾಗಾಧಿಕಾರಿ ವರದಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗ ಮುರಳಿ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

ತುಮಕೂರು : ವಿವಾದಿತ ಸ್ಥಳದಲ್ಲಿ ತೆಂಗು, ಅಡಿಕೆ ಮರಗಳನ್ನು ಕಡಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಿಗ ಮುರಳಿ ಎಂಬುವರನ್ನು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.

ಜಿಲ್ಲೆಯ ಗುಬ್ಬಿ ತಾಲೂಕು ತಿಪ್ಟೂರಿನಲ್ಲಿ ಶ್ರೀ ಉಡುಸಲಮ್ಮ ಜಾತ್ರೆ ಹಿನ್ನೆಲೆ ಮರಗಳನ್ನು ಕಡಿದು ಹಾಕಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಭಕ್ತಾದಿಗಳ ವಾಹನ ನಿಲುಗಡೆಗೆ ಸ್ಥಳಾವಕಾಶಕ್ಕಾಗಿ ಜಮೀನಿನಲ್ಲಿದ್ದ ಸಣ್ಣ ಗಿಡಗಳನ್ನು ತೆರವುಗೊಳಿಸಲು ಗುಬ್ಬಿ ತಹಸೀಲ್ದಾರ್ ಮಮತ ಮೌಖಿಕ ಆದೇಶ ನೀಡಿದ್ದರು. ಆದರೆ, ಗ್ರಾಮ ಲೆಕ್ಕಿಗ ಮುರಳಿ ತೆಂಗು, ಅಡಿಕೆ ಮರಗಳನ್ನು ಕಡಿದು ಹಾಕಿಸಿದ್ದರು.

ತೆಂಗು,ಅಡಿಕೆ ಮರಗಳನ್ನ ಕಡಿಸಿದ್ದ ಗ್ರಾಮ ಲೆಕ್ಕಿಗ ಅಮಾನತು..

ಈ ಘಟನೆ ಕುರಿತಂತೆ ಉಪವಿಭಾಗಾಧಿಕಾರಿ ವರದಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗ ಮುರಳಿ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.