ETV Bharat / state

ಖಾತೆ ವರ್ಗಾವಣೆ ಮಾಡಲು ಲಂಚ: ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ - ತುಮಕೂರು ಲೇಟೆಸ್ಟ್​ ನ್ಯೂಸ್​

ಖಾತೆ ವರ್ಗಾವಣೆ ಮಾಡಿಕೊಡಲು 20,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

village-accountant-arrested-for-accepting-bribe
ಖಾತೆ ವರ್ಗಾವಣೆ ಮಾಡಲು ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ
author img

By

Published : Jan 7, 2021, 7:00 PM IST

ತುಮಕೂರು: ಖಾತೆ ವರ್ಗಾವಣೆ ಮಾಡಿಕೊಡಲು 20,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಕೆ.ಬಿ.ಲೋಕೇಶ್ ಬಂಧಿತ ಗ್ರಾಮ ಲೆಕ್ಕಾಧಿಕಾರಿ. ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದ ಸತೀಶ್ ಎಂಬುವವರು ತಮ್ಮ ತಾಯಿ ಹಾಗೂ ದೊಡ್ಡಪ್ಪನ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಖಾತೆ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ಕೆ.ಬಿ.ಲೋಕೇಶ್ 20,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ಓದಿ: ಬೆಳಗಾವಿಯ ಬ್ಯಾಂಕ್ ದರೋಡೆ ಪ್ರಕರಣ: ಕಳ್ಳನನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸರು

ಕುಣಿಗಲ್ ಪಟ್ಟಣದ ಮುನಿ ಕಾಳ್ಯ ಬಿಲ್ಡಿಂಗ್​ನ ಮೊದಲನೆ ಮಹಡಿಯಲ್ಲಿ ಮೊದಲ ಕಂತಾಗಿ ಹತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.