ETV Bharat / state

ತುಮಕೂರಿನ ವಿವಿಧ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ.. - varamahalakshmi festival tumkur

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಬಿ ಹೆಚ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ.

ವರಮಹಾಲಕ್ಷ್ಮೀ ಹಬ್ಬ
author img

By

Published : Aug 9, 2019, 3:10 PM IST

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಬೆಳಗಿನಿಂದಲೂ ದೇವರ ದರ್ಶನ ಪಡೆಯಲು ಭಕ್ತಾಧಿಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.

ಶ್ರೀ ವರಮಹಾಲಕ್ಷ್ಮಿ ಹಬ್ಬದ ಆಚರಣೆ..

ನಗರದ ಬಿ.ಹೆಚ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷವಾದ ಅಲಂಕಾರವನ್ನು ಮಾಡುವ ಮೂಲಕ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡಲಾಯಿತು. ಅದೇ ರೀತಿ ನಗರದ ಬಟವಾಡಿಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೂ ವಿಶೇಷವಾದ ಪೂಜೆ-ಪುನಸ್ಕಾರಗಳು ನಡೆದವು.

ಶ್ರಾವಣ ಮಾಸವನ್ನು ಹಬ್ಬಗಳ ಮಾಸ ಎಂದರೆ ತಪ್ಪಾಗಲಾರದು. ಯಾಕೆಂದರೆ, ಅಲ್ಲಿಂದ ಪ್ರಾರಂಭವಾಗುವ ಹಬ್ಬಗಳು ಕುಟುಂಬ ಸಮೇತ ನಾನಾ ವಿಧದಲ್ಲಿ ದೇವತಾ ಆರಾಧನೆಯನ್ನು ಮಾಡಲು ಅನುವು ಮಾಡಿಕೊಡುತ್ತವೆ. ಶ್ರಾವಣಮಾಸದಲ್ಲಿ ನಾಗರಪಂಚಮಿಯ ನಂತರ ಬರುವ ಪ್ರಮುಖವಾದ ಹಬ್ಬವೇ ಈ ವರಮಹಾಲಕ್ಷ್ಮಿ ಹಬ್ಬ. ಈ ವರಮಹಾಲಕ್ಷ್ಮಿ ಹಬ್ಬವನ್ನು ಮುತ್ತೈದೆಯರು ಆಚರಿಸುವ ವಿಶೇಷ ವೃತವಾಗಿದೆ. ಧನ ಸಂಪತ್ತಿನ ಒಡತಿಯ ಆರಾಧನೆ ಅಷ್ಟೇ ಅಲ್ಲ, ವಿದ್ಯೆ-ಬುದ್ಧಿ, ಧಾನ್ಯ ಸೇರಿ ಎಲ್ಲವನ್ನು ಆಹ್ವಾನಿಸುವುದು ಈ ವ್ರತದ ಮಹತ್ವವಾಗಿದೆ.

Intro:ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಬೆಳಗಿನಿಂದಲೂ ದೇವರ ದರ್ಶನ ಪಡೆಯಲು ಭಕ್ತಾಧಿಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.

Body:ನಗರದ ಬಿ.ಹೆಚ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷವಾದ ಅಲಂಕಾರವನ್ನು ಮಾಡುವ ಮೂಲಕ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡಲಾಯಿತು.ಅದೇ ರೀತಿ ನಗರದ ಬಟವಾಡಿಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೂ ವಿಶೇಷವಾದ ಪೂಜೆ-ಪುನಸ್ಕಾರಗಳು ನಡೆದವು.
ಶ್ರಾವಣ ಮಾಸವನ್ನು ಹಬ್ಬಗಳ ಮಾಸ ಎಂದರೆ ತಪ್ಪಾಗಲಾರದು, ಏಕೆಂದರೆ ಅಲ್ಲಿಂದ ಪ್ರಾರಂಭವಾಗುವ ಹಬ್ಬಗಳು ಕುಟುಂಬ ಸಮೇತ ನಾನಾ ವಿಧದಲ್ಲಿ ದೇವತಾ ಆರಾಧನೆಯನ್ನು ಮಾಡಲು ಅನುವುಮಾಡಿಕೊಡುತ್ತವೆ. ಶ್ರಾವಣಮಾಸದಲ್ಲಿ ನಾಗರಪಂಚಮಿಯ ನಂತರ ಬರುವ ಪ್ರಮುಖವಾದ ಹಬ್ಬವೇ ಈ ವರಮಹಾಲಕ್ಷ್ಮಿ ಹಬ್ಬ.
ಈ ವರಮಹಾಲಕ್ಷ್ಮಿ ಹಬ್ಬವನ್ನು ಮುತ್ತೈದೆಯರು ಆಚರಿಸುವ ವಿಶೇಷ ವೃತ್ತವಾಗಿದೆ. ಧನ ಸಂಪತ್ತಿನ ಒಡತಿಯ ಆರಾಧನೆ ಅಷ್ಟೇ ಅಲ್ಲ, ವಿದ್ಯೆ-ಬುದ್ಧಿ, ಧಾನ್ಯ ಸೇರಿ ಎಲ್ಲವನ್ನು ಆಹ್ವಾನಿಸುವುದು ಈ ವೃತದ ಮಹತ್ವವಾಗಿದೆ.

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.