ತುಮಕೂರು: ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಘಟಕದ ಅಧ್ಯಕ್ಷರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಇಬ್ಬರು ಸಹಾಯಕ ಎಂಜಿನಿಯರ್ಗಳನ್ನು ಅಮಾನತು ಮಾಡಲಾಗಿದೆ. ತುಮಕೂರು ಲೋಕೋಪಯೋಗಿ ವೃತ್ತದ ಸಹಾಯಕ ಎಂಜಿನಿಯರ್ ಆರ್. ಶಂಭುಕುಮಾರ್ ಮತ್ತು ಬೆಂಗಳೂರು ಕೆ.ಆರ್ ವೃತ್ತದ ಲೋಕೋಪಯೋಗಿ ಇಲಾಖೆ ಪಿಆರ್ಎಎಂಸಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಎಂ. ಅಶ್ವಿನಿ ಅಮಾನತುಗೊಂಡಿದ್ದಾರೆ.
ಶಂಭುಕುಮಾರ್, ಅಶ್ವಿನಿ ಮತ್ತು ಮತ್ತೊಬ್ಬ ಮಹಿಳೆ ಸೇರಿಕೊಂಡು ಬೆಂಗಳೂರಿನಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರೇಶ್ವರ ಕೊಲೆಗೆ ಯತ್ನಿಸಿದ್ದರು. ಕಾರು ಹರಿಸಿ ಕೊಲೆ ಪ್ರಯತ್ನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಏಪ್ರಿಲ್ 12ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶ್ವಿನಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ದೂರು ದಾಖಲಾಗುತ್ತಿದ್ದಂತೆ ಎಂಜಿನಿಯರ್ ಶಂಭುಕುಮಾರ್ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಕವಿವಿಗೆ ಭೇಟಿ ನೀಡಿದ ಹೆಚ್ಡಿಕೆ.. ಮುತ್ತಿಗೆಗೆ ಯತ್ನಿಸಿದ ಪಿಎಸ್ಐ ಅಭ್ಯರ್ಥಿ ಮೇಲೆ ಗನ್ಮ್ಯಾನ್ನಿಂದ ಹಲ್ಲೆ!