ಪಾವಗಡ / ತುಮಕೂರು: ಅಂತರ್ ಜಾತಿಯ ವಿವಾಹವಾಗಿದ್ದ ತಾಲೂಕಿನ ನವ ದಂಪತಿ ಬೆಂಗಳೂರಿನಲ್ಲಿ ಆನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.
ತಾಲೂಕಿನ ಅಕ್ಕಮ್ಮನ ಹಳ್ಳಿ ಗ್ರಾಮದ ನಂದಿನಿ (23) ಮತ್ತು ಈಶ್ವರ್ (24) ಅಂತರ್ ಜಾತಿಯವರಾಗಿದ್ದು ಪರಸ್ಪರ ಪ್ರೀತಿಸಿದ್ದರು. ಕಳೆದ 15 ದಿನಗಳ ಹಿಂದೆ ಗ್ರಾಮದಿಂದ ಇಬ್ಬರು ನಾಪತ್ತೆಯಾಗಿದ್ದರು. ಈ ಕುರಿತು ಪಾವಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಆದರೆ, ಇಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಂಶ ಹೋರಬೀಳಬೇಕಾಗಿದೆ.
ಸದ್ಯ ಮೃತದೇಹಗಳನ್ನು ವೈದ್ಯಕೀಯ ತಪಾಸಣೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಘಟನೆ ಕುರಿತು ಯಾರೂ ಕೂಡ ದೂರು ನೀಡಿಲ್ಲ ಎಂಬುವುದೇ ಆಶ್ಚರ್ಯಕರವಾಗಿದೆ.