ETV Bharat / state

ತುಮಕೂರು: ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅಭಿಮಾನಿಗಳು - ಸಂಚಾರಿ ವಿಜಯ್ ಪಾರ್ಥಿವ ಶರೀರ

ಹುಳಿಯಾರು ಪೊಲೀಸ್ ಸ್ಟೇಷನ್ ಸರ್ಕಲ್‌ನಲ್ಲಿ ಅಂತಿಮ ದರ್ಶನಕ್ಕೆ ಕಾದಿದ್ದ ಅಭಿಮಾನಿಗಳಿಗೆ 5 ನಿಮಿಷದಷ್ಟು ಸಮಯ ಆ್ಯಂಬುಲೆನ್ಸ್​ ನಿಲ್ಲಿಸಿ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಯಿತು.

actor-sanjay-vijay
ಸಂಚಾರಿ ವಿಜಯ್
author img

By

Published : Jun 15, 2021, 3:36 PM IST

ತುಮಕೂರು: ನಟ ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್​ ಮೂಲಕ ತುಮಕೂರು, ಶಿರಾ, ಹುಳಿಯಾರು ಮೂಲಕ ಕಡೂರು ತಾಲೂಕಿನ ಪಂಚನಹಳ್ಳಿಗೆ ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ, ಶಿರಾದಲ್ಲಿ ತಹಶೀಲ್ದಾರ್ ಮಮತಾ ಅಂತಿಮ ನಮನ ಸಲ್ಲಿಸಿದ್ದಾರೆ. ಹುಳಿಯಾರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಮಧ್ಯಾಹ್ನ 12 ಗಂಟೆಯಿಂದಲೇ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅಭಿಮಾನಿಗಳು

ಹುಳಿಯಾರು ಪೊಲೀಸ್ ಸ್ಟೇಷನ್ ಸರ್ಕಲ್‌ನಲ್ಲಿ ಅಂತಿಮ ದರ್ಶನಕ್ಕೆ ಕಾದಿದ್ದ ಅಭಿಮಾನಿಗಳಿಗೆ 5 ನಿಮಿಷದಷ್ಟು ಸಮಯ ಆ್ಯಂಬುಲೆನ್ಸ್​ ನಿಲ್ಲಿಸಿ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ವೈಎಸ್​​​ವಿ ದತ್ತ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಪಾರ್ಥಿವ ಶರೀರದೊಂದಿಗೆ ಹುಳಿಯಾರಿಗೆ ಆಗಮಿಸಿದ್ದರು.

ಓದಿ: ತವರಿನಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ.. ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಜಯ್​ ಅಂತಿಮ ವಿಧಿವಿಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.