ETV Bharat / state

ಅವ್ಯವಸ್ಥೆಯ ಆಗರವಾದ ಪುರುಷ ವಿದ್ಯಾರ್ಥಿಗಳ ಹಾಸ್ಟೆಲ್​​: ಶೌಚಾಲಯದ ನೀರಿನಿಂದ ಅಡುಗೆ! - ತುಮಕೂರು ಪುರುಷ ಹಾಸ್ಟೆಲ್​​ನಲ್ಲಿ ಪ್ರತಿಭಟನೆ

ತುಮಕೂರಿನ ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯದ ನೀರನ್ನ ಬಳಸಿ ಅಡುಗೆ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಊಟ-ತಿಂಡಿ ತ್ಯಜಿಸಿ ಧರಣಿ ನಡೆಸಿದ್ದಾರೆ.

protest
ಅವ್ಯವಸ್ಥೆಯ ಆಗರವಾದ ಪುರುಷ ವಿದ್ಯಾರ್ಥಿಗಳ ಹಾಸ್ಟೆಲ್
author img

By

Published : Jan 13, 2020, 9:03 PM IST

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಪುರುಷರ ವಿದ್ಯಾರ್ಥಿ ನಿಲಯ ಸಮಸ್ಯೆಗಳ ಆಗರವಾಗಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಸ್ಟೆಲ್​​ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ಹಾಸ್ಟೆಲ್ ನ ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸದೆ ಪ್ರತಿಭಟನೆ ನಡೆಸಿದರು.

ಅವ್ಯವಸ್ಥೆಯ ಆಗರವಾದ ಪುರುಷ ವಿದ್ಯಾರ್ಥಿಗಳ ಹಾಸ್ಟೆಲ್

ಸ್ನಾನ ಹಾಗೂ ಶೌಚಾಲಯಕ್ಕೆ ಬಳಸುವ ನೀರನ್ನು ಅಡುಗೆಗೆ ಬಳಸಲಾಗುತ್ತಿದೆ. ಈ ಹಿಂದೆ ಇದ್ದಂತಹ ಊಟದ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ.ಅಡುಗೆ ಸಿಬ್ಬಂದಿಗೆ ಅಗತ್ಯವಾದ ಸಾಮಾಗ್ರಿಗಳನ್ನು ನೀಡುತ್ತಿಲ್ಲ, ಶೌಚಾಲಯಕ್ಕೆ ಸರಿಯಾದ ಬಾಗಿಲಿನ ವ್ಯವಸ್ಥೆ ಇಲ್ಲ ಸೋಲಾರ್ ಹೇಳಿಕೊಳ್ಳಲು ಇದೆ. ಆದರೆ ಸ್ನಾನ ಮಾಡಲು ಬಿಸಿ ನೀರು ಬರುವುದಿಲ್ಲ ಮುಂತಾದ ಸಮಸ್ಯೆಗಳನ್ನು ಇಟ್ಟುಕೊಂಡು ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಸತೀಶ್, ಈ ಹಾಸ್ಟೆಲ್ ಕುಲಪತಿಗಳ ಹಾಗೂ ಪರೀಕ್ಷಾಂಗ ಕುಲಸಚಿವರ ವ್ಯಾಪ್ತಿಗೆ ಸೇರಲಿದೆ, ಕಳೆದ ಎರಡು ವರ್ಷಗಳಿಂದಲೂ ಸಮಸ್ಯೆಗಳು ಎದುರಾಗುತ್ತಿದ್ದು, ಅನುಸರಣೆ ಮಾಡಿಕೊಂಡು ಹೋಗುತ್ತಿದ್ದೇವೆ. ಈಗಾಗಲೇ ಕುಲಸಚಿವರಿಗೆ ಹಲವು ಬಾರಿ ಈ ಸಮಸ್ಯೆಗಳ ಬಗ್ಗೆ ಪತ್ರದ ಮೂಲಕ ತಿಳಿಸಿದ್ದೇವೆ, ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನು ಈ ಹಾಸ್ಟೆಲಿಗೆ ಸ್ಥಳೀಯರು ಪ್ರವೇಶ ಮಾಡುತ್ತಿದ್ದು ಧೂಮಪಾನ, ಮಧ್ಯಪಾನ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ನಮಗೆ ಏನಾದರೂ ತೊಂದರೆಯಾದರೆ ಎಂದು ಕೇಳಲು ಹಿಂದೆಟಾಕುವ ಪರಿಸ್ಥಿತಿಯುಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Intro:ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಕ್ಕೆ ಒಳಪಡುವ ಪುರುಷರ ವಿದ್ಯಾರ್ಥಿ ನಿಲಯ ಸಮಸ್ಯೆಗಳ ಆಗರವಾಗಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Body:ತುಮಕೂರು ವಿಶ್ವವಿದ್ಯಾನಿಲಯದ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ಹಾಸ್ಟೆಲ್ ನ ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸದೆ ಪ್ರತಿಭಟನೆ ನಡೆಸಿದರು.

ಸ್ನಾನ ಹಾಗೂ ಶೌಚಾಲಯಕ್ಕೆ ಬಳಸುವ ನೀರನ್ನು ಅಡುಗೆಗೆ ಬಳಸಲಾಗುತ್ತದೆ, ಈ ಹಿಂದೆ ಇದ್ದಂತಹ ಊಟದ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ, ಅಡುಗೆ ಸಿಬ್ಬಂದಿಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ನೀಡುತ್ತಿಲ್ಲ, ಶೌಚಾಲಯಕ್ಕೆ ಸರಿಯಾದ ಬಾಗಿಲಿನ ವ್ಯವಸ್ಥೆ ಇಲ್ಲ ಸೋಲರ್ ಹೇಳಿಕೊಳ್ಳಲು ಇದೇ ಆದರೆ ಸ್ನಾನ ಮಾಡಲು ಬಿಸಿ ನೀರು ಬರುವುದಿಲ್ಲ ಎಂಬ ಸಮಸ್ಯೆಗಳನ್ನು ಇಟ್ಟುಕೊಂಡು ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಸತೀಶ್, ಈ ಹಾಸ್ಟೆಲ್ ಕುಲಪತಿಗಳ ಹಾಗೂ ಪರೀಕ್ಷಾಂಗ ಕುಲಸಚಿವರ ವ್ಯಾಪ್ತಿಗೆ ಸೇರಲಿದೆ, ಕಳೆದ ಎರಡು ವರ್ಷಗಳಿಂದಲೂ ಸಮಸ್ಯೆಗಳು ಎದುರಾಗುತ್ತಿದ್ದು, ಅನುಸರಣೆ ಮಾಡಿಕೊಂಡು ಹೋಗುತ್ತಿದ್ದೇವೆ. ಈಗಾಗಲೇ ಕುಲಸಚಿವರಿಗೆ ಹಲವಾರು ಬಾರಿ ಈ ಸಮಸ್ಯೆಗಳ ಬಗ್ಗೆ ಪತ್ರದ ಮೂಲಕ ತಿಳಿಸಿದ್ದೇವೆ, ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನು ಈ ಹಾಸ್ಟೆಲಿಗೆ ಸ್ಥಳೀಯರು ಪ್ರವೇಶ ಮಾಡುತ್ತಿದ್ದು ಧೂಮಪಾನ, ಮಧ್ಯಪಾನ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ನಮಗೆ ಏನಾದರೂ ತೊಂದರೆಯಾದರೆ ಎಂದು ಕೇಳಲು ಹಿಂದೆಟಾಕುವ ಪರಿಸ್ಥಿತಿಯುಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೈಟ್: ಸತೀಶ್, ವಿದ್ಯಾರ್ಥಿ.

Conclusion:ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.