ತುಮಕೂರು: ಜಿಲ್ಲೆಯಲ್ಲಿ ಈವರೆಗೆ 1268 ಕೊರೊನಾ ಶಂಕಿತ ಮಾದರಿಗಳು ನೆಗೆಟಿವ್ ಬಂದಿದ್ದು, ಇನ್ನೂ 261 ಮಂದಿಯ ತಪಾಸಣಾ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಹೆಚ್ಓ ಡಾ. ಚಂದ್ರಿಕಾ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಗೆ ಹೊರದೇಶದಿಂದ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿತ್ತು. ಈ ಪೈಕಿ ಹೋಂ ಕ್ವಾರಂಟೈನ್ನಲ್ಲಿ ಯಾರೂ ಇರುವುದಿಲ್ಲ. ಒಟ್ಟು 479 ಮಂದಿಯನ್ನು ಐಸೊಲೇಷನ್ನಲ್ಲಿಡಲಾಗಿದ್ದು, ಆಸ್ಪತ್ರೆಯ ಐಸೊಲೇಷನ್ನಲ್ಲಿರುವವರು 90 ಮಂದಿ. 370 ಜನರ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ.
ಈವರೆಗೆ 1545 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದೆ. ಆ ಪೈಕಿ 1268 ಮಾದರಿಗಳು ನೆಗೆಟಿವ್ ಬಂದಿದ್ದು, 13 ಮಾದರಿಗಳು ತಿರಸ್ಕೃತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.