ETV Bharat / state

ತುಮಕೂರಿನ ಮಾರುಕಟ್ಟೆಗೆ ಹೋಗೋರು ಕರ್ಚೀಫ್​ನ್ನು ಮರೆಯದೇ ಒಯ್ಯಿರಿ - ಅಂತರಸನಹಳ್ಳಿ ಮಾರುಕಟ್ಟೆ

ಅಂತರಸನಹಳ್ಳಿ ಬಳಿಯಿರುವ ಮಾರುಕಟ್ಟೆಯಲ್ಲಿನ ಘನತಾಜ್ಯವನ್ನು ವಿಲೇವಾರಿ ಮಾಡುವಲ್ಲಿ ತುಮಕೂರು ಮಹಾನಗರಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ರಸ್ತೆಬದಿಯಲ್ಲಿ ಕೊಳೆತ ಹೂ, ಹಣ್ಣು-ತರಕಾರಿಗಳನ್ನು ಎಸೆಯಲಾಗುತ್ತಿದ್ದು, ಇದರಿಂದ ವಾಹನ ಸವಾರರು ಹಾಗೂ ರಸ್ತೆ ಬದಿ ವ್ಯಾಪಾರಿಗಳು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

tumkur APMC market
author img

By

Published : Nov 1, 2019, 10:10 PM IST

ತುಮಕೂರು: ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ಉಳಿಯುವ ಕೊಳೆತ ಹೂವು, ಹಣ್ಣು, ತರಕಾರಿಗಳನ್ನು ರಸ್ತೆಬದಿಯಲ್ಲಿ ಸುರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.

ಮಾರ್ಕೆಟ್​ ಸುತ್ತ ಇರುವ ಕಸದ ರಾಶಿ

ಹೌದು, ಅಂತರಸನಹಳ್ಳಿ ಬಳಿಯಿರುವ ಮಾರುಕಟ್ಟೆಯಲ್ಲಿನ ಘನತಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಮಹಾನಗರಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ರಸ್ತೆಬದಿಯಲ್ಲಿ ಕೊಳೆತ ಹೂ, ಹಣ್ಣು-ತರಕಾರಿಗಳನ್ನು ಎಸೆಯಲಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ರಸ್ತೆ ಬದಿ ವ್ಯಾಪಾರಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಎರಡನೇ ವಾರ್ಡ್​ಗೆ ಸೇರುವ ಈ ಮಾರುಕಟ್ಟೆಯು ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗೆ ಒಳಗಾಗುತ್ತಲೇ ಇದೆ. ನಗರ ಪ್ರದೇಶದಿಂದ ಹೊರಗಿರುವ ಕಾರಣ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಲೆಹಾಕದೆ ಸುಮ್ಮನಾಗಿದ್ದಾರೆ.

ಸರ್ಕಾರ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮ, ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ ಯಾವುದೂ ಸಹ ಸರಿಯಾಗಿ ಜಾರಿಯಾಗದಿರುವುದು ನಿಜಕ್ಕೂ ವಿಪರ್ಯಾಸ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾಗಿ 7 ವರ್ಷಗಳೇ ಕಳೆದಿವೆ. ಆದ್ರೆ ಪ್ರಾರಂಭದಿಂದಲೂ ಇದೇ ಸಮಸ್ಯೆ ಇದೆ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತದೆಯಂತೆ. ಹೀಗಾಗಿ ವಾಹನ ಸವಾರರು, ಗ್ರಾಹಕರು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮಾರುಕಟ್ಟೆಯ ಕಸವನ್ನು ರಸ್ತೆ ಬದಿ ಹಾಕುವುದರಿಂದ ವ್ಯಾಪಾರ ಮಾಡಲು ಸಮಸ್ಯೆಯಾಗುತ್ತಿದೆ. ಅಲ್ಲದೆ ಸಾರ್ವಜನಿಕರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಬರುತ್ತದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಾಸನೆಯಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿ ನಾಗಭೂಷಣ್ ಅಳಲು ತೋಡಿಕೊಂಡಿದ್ದಾರೆ.

ಇನ್ನಾದರೂ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಲಕಾಲಕ್ಕೆ ಘನತಾಜ್ಯ ವಿಲೇವಾರಿ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Intro:ತುಮಕೂರು: ಅಂತರಸನಹಳ್ಳಿ ಹೂ, ಹಣ್ಣು, ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ, ಉಳಿದು ಕೊಳೆತ ಹೂವು, ಹಣ್ಣು, ತರಕಾರಿಗಳನ್ನು ರಸ್ತೆಬದಿಯಲ್ಲಿ ಸುರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.

Body:ಹೌದು ಅಂತರಸನಹಳ್ಳಿ ಬಳಿಯಿರುವ ಮಾರುಕಟ್ಟೆಯಲ್ಲಿ ಉಂಟಾಗುವ ಘನತಾಜ್ಯವನ್ನು ವಿಲೇವಾರಿ ಮಾಡುವ ಮಹಾನಗರಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರಿದ್ದಾರೆ. ಹೀಗಾಗಿ ರಸ್ತೆಬದಿಯಲ್ಲಿ ಕೊಳೆತ ಹೂ, ಹಣ್ಣು-ತರಕಾರಿಗಳನ್ನು ಎಸೆಯಲಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಎರಡನೇ ವಾರ್ಡ್ ಗೆ ಸೇರುವ ಈ ಮಾರುಕಟ್ಟೆಯು ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗೆ ಒಳಗಾಗುತ್ತಲೇ ಇದೆ. ನಗರ ಪ್ರದೇಶದಿಂದ ಹೊರಗಿರುವ ಕಾರಣ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಲ್ಲಿ ವಿಫಲರಾಗಿದ್ದಾರೆ.
ಇದರ ಜೊತೆಗೆ ಶೌಚಾಲಯದ ವ್ಯವಸ್ಥೆ ಇದ್ದರೂ ಸಹ ಕಸದ ಮಧ್ಯೆಯೇ ಅನೇಕರು ಮೂತ್ರ ವಿಸರ್ಜನೆ ಮಾಡುವ ಮೂಲಕ ಇನ್ನಷ್ಟು ಅವ್ಯವಸ್ಥೆಯನ್ನು ನಿರ್ಮಿಸುತ್ತಿದ್ದಾರೆ.
ಸರ್ಕಾರ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು, ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ಹಣ ಖರ್ಚು ಮಾಡುತ್ತದೆ, ಆದರೆ ಯಾವುದು ಸಹ ಸರಿಯಾಗಿ ಜಾರಿಯಾಗದೇ ಇರುವುದು ನಿಜಕ್ಕೂ ಶೋಚನೀಯ ಸಂಗತಿ.
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾಗಿ 7 ವರ್ಷಗಳು ಕಳೆದಿದೆ, ಪ್ರಾರಂಭದಿಂದಲೂ ಇದೇ ಸಮಸ್ಯೆ ಎದುರಾಗುತ್ತಿದೆ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಕಸ ವಿಲೇವಾರಿ ಮಾಡುತ್ತಾರೆ, ಇದರಿಂದ ವಾಹನ ಸವಾರರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಆ ಮೂಲಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ, ರಸ್ತೆಗಳ ಬಲ ಮತ್ತು ಎಡ ಭಾಗಗಳಲ್ಲಿ ಹಾಗೆಯೇ ಕಸವನ್ನು ಹಾಕುವುದರಿಂದ ಗಬ್ಬುನಾರುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಸವನ್ನು ತೆರವುಗೊಳಿಸುವ ಮೂಲಕ ರಸ್ತೆಯನ್ನು ಸರಿಪಡಿಸುವ ಕಾರ್ಯ ಮಾಡಬೇಕಿದೆ ಎಂದು ಸುರೇಶ್ ತಿಳಿಸಿದರು.
ಬೈಟ್: ಸುರೇಶ್, ಸಮಾಜ ಸೇವಕ
ಮಾರುಕಟ್ಟೆಯ ಕಸವನ್ನು ರಸ್ತೆ ಬದಿ ಹಾಕುವುದರಿಂದ ವ್ಯಾಪಾರ ಮಾಡಲು ಸಮಸ್ಯೆಯಾಗುತ್ತಿದೆ, ಅಲ್ಲದೆ ಸಾರ್ವಜನಿಕರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಬರುತ್ತದೆ, ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಆದರೂ ಯಾವುದೇ ಅಧಿಕಾರಿಗಳು ಕ್ರಮಕೈಗೊಂಡಿಲ್ಲ, ಈ ವಾಸನೆಯಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿ ನಾಗಭೂಷಣ್ ತಿಳಿಸಿದರು.
ಬೈಟ್: ನಾಗಭೂಷಣ್, ಬೀದಿ ಬದಿ ವ್ಯಾಪಾರಿ.

Conclusion:ಇನ್ನಾದರೂ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಾಲಕಾಲಕ್ಕೆ ಘನತಾಜ್ಯ ವಿಲೇವಾರಿ ಮಾಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.