ತುಮಕೂರು: ನಗರದ ಶ್ರೀ ಸಿದ್ಧಿ ವಿನಾಯಕ ಮಾರುಕಟ್ಟೆ ಜಾಗದಲ್ಲಿ ಸ್ಮಾಟ್ ಸಿಟಿ ವತಿಯಿಂದ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಬಹುಮಹಡಿ ವಾಣಿಜ್ಯ ಮಳಿಗೆ ನಿರ್ಮಾಣ ಯೋಜನೆಯನ್ನು ಕೈ ಬಿಡಲಾಗುವುದು ಎಂದು ಘೋಷಣೆಯಾದ ಬೆನ್ನಲ್ಲೇ ಸ್ಥಳೀಯ ವರ್ತಕರು ಸಿಹಿಹಂಚಿ ಸಂಭ್ರಮಪಟ್ಟರು.
ಸ್ಥಳದಲ್ಲಿದ್ದ ದೇಗುಲವನ್ನು ನೆಲಸಮ ಮಾಡಲು ಹೊರಟಿದ್ದ ನಿರ್ಧಾರದಿಂದ ಪಾಲಿಕೆ ಹಿಂದೆ ಸರಿದಿದೆ. ಇದರಿಂದಾಗಿ ಸಂತಸಗೊಂಡ ವರ್ತಕರು ಪಟಾಕಿ ಸಿಡಿಸಿ, ಸಿಹಿ ಹಂಚಿದರು.
ಈ ಹಿಂದೆ ಸ್ಮಾರ್ಟ್ ಸಿಟಿ ವತಿಯಿಂದ ಬಹುಮಹಡಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದರು.