ETV Bharat / state

ಈ ಕುಟುಂಬ ರಾಜಕಾರಣ ಎಂಬುದು ಕೆಟ್ಟ ಪದ್ಧತಿ: ಬಿ.ಎಸ್ ಮಲ್ಲಿಕಾರ್ಜುನಯ್ಯ

80, 90 ವಯಸ್ಸಾದರೂ ತಾವೇ ರಾಜಕಾರಣ ಮಾಡಬೇಕು. ತಮ್ಮ ನಂತರ ಮಕ್ಕಳು, ಮಕ್ಕಳ ನಂತರ ಮೊಮ್ಮಕ್ಕಳು ಎಂಬುದು ಕೆಟ್ಟ ಪದ್ಧತಿ. ಕುಟುಂಬ ರಾಜಕಾರಣವನ್ನು ನಿರ್ನಾಮ ಮಾಡಬೇಕಿದೆ ಎಂದು ಪಕ್ಷೇತರ ಅಭ್ಯರ್ಥಿ ಬಿ.ಎಸ್ ಮಲ್ಲಿಕಾರ್ಜುನಯ್ಯ ಗುಡುಗಿದರು.

ಬಿ.ಎಸ್ ಮಲ್ಲಿಕಾರ್ಜುನಯ್ಯ.
author img

By

Published : Apr 3, 2019, 12:10 AM IST

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಂಸದ ಬಸವರಾಜು ಅವರು ತಾವು ಮಾಡಿರುವ ಕಾರ್ಯಗಳನ್ನು ಜನರ ಮುಂದೆ ಇಟ್ಟು ಮತಯಾಚನೆ ಮಾಡಲಿ. ಅದನ್ನು ಬಿಟ್ಟು ತಮ್ಮ ಕಾರ್ಯಕರ್ತರ ಮೂಲಕ ಹಣ, ಹೆಂಡ ಹಂಚಿ ಮತಯಾಚನೆ ಮಾಡಬೇಡಿ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಎಸ್ ಮಲ್ಲಿಕಾರ್ಜುನಯ್ಯ ಸವಾಲು ಹಾಕಿದರು.

ಭಾರತ ದೇಶ ಇಂದು ಅತ್ಯಂತ ಸಂಧಿಗ್ಧ ಪರಿಸ್ಥಿತಿಯಲ್ಲಿದೆ, ಅಭಿವೃದ್ಧಿಯ ವಿಚಾರವಾಗಿ, ರಾಜಕೀಯದ ವಿಚಾರವೇ ಆಗಲಿ ಎಲ್ಲ ದೃಷ್ಟಿಕೋನದಿಂದಲೂ ಆತಂಕಕಾರಿ ಪರಿಸ್ಥಿತಿಯಲ್ಲಿದೆ.ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ದೇಶವನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಪ್ರತಿ ಹಂತದಲ್ಲೂ ರಾಜಕಾರಣ ಕಲುಷಿತಗೊಳ್ಳುತ್ತಿದೆ.

ಬಿ.ಎಸ್ ಮಲ್ಲಿಕಾರ್ಜುನಯ್ಯ.

ಭಾರತದಲ್ಲಿ ಮತದಾರರು ಭ್ರಷ್ಟರಾಗಿಲ್ಲ, ರಾಜಕೀಯ ಪಕ್ಷಗಳು ಆರೀತಿ ಮಾಡಿವೆ. ಜನಸಾಮಾನ್ಯರಾಗಿ ಸ್ಪರ್ಧಿಸಿ ಅಧಿಕಾರ ಪಡೆದ ನಂತರದ ದಿನಗಳಲ್ಲಿ ಇವರೂ ಸಹ ಭ್ರಷ್ಟರಾಗುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಹೋರಾಟಗಾರರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯವನ್ನು ಶುದ್ಧೀಕರಣ ಮಾಡಲು ಮುಂದಾಗಿದ್ದೇನೆ ಎಂದು ಮಲ್ಲಿಕಾರ್ಜುನಯ್ಯ ತಿಳಿಸಿದರು.

ರಾಜ್ಯದಲ್ಲಿ ಅಂತರ್ಜಲ ಕುಸಿತದಲ್ಲಿ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕಳೆದ ಮೂರು ದಶಕಗಳಿಂದ ಅಧಿಕಾರ ಪಡೆದು ಆಡಳಿತ ನಡೆಸಿದವರು, ಇಲ್ಲಿಯವರೆಗೂ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾರು ಕಾರ್ಯನಿರ್ವಹಿಸಿಲ್ಲ. ತುಮಕೂರು ಜಿಲ್ಲೆಗೆ 22 ಟಿಎಂಸಿ ನೀರು ಸಾಕಾಗುತ್ತದೆ. ಆದರೆ ಅದನ್ನು ಸರಿಯಾಗಿ ಬಿಡುತ್ತಿಲ್ಲ ಎಂದು ದೂರಿದರು.

ಇಂದು ಹಣ ಇರುವವರು, ಜಾತಿ ಬಲ ಇದ್ದವರು ಚುನಾವಣೆ ಎದುರಿಸುತ್ತಿದ್ದಾರೆ. ಇಡೀ ದೇಶವನ್ನು ಹಣ ಮತ್ತು ಜಾತಿ ಆಧಾರದ ಮೇಲೆ ವಿಘಟನೆ ಮಾಡಲಾಗುತ್ತಿದೆ. ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತನೆ ಮಾಡುತ್ತಿದ್ದಾರೆ. 80, 90 ವಯಸ್ಸಾದರೂ ತಾವೇ ರಾಜಕಾರಣ ಮಾಡಬೇಕು, ತಮ್ಮ ನಂತರ ಮಕ್ಕಳು, ಮಕ್ಕಳ ನಂತರ ಮೊಮ್ಮಕ್ಕಳು ಎಂಬುದು ಎಂತಹ ಕೆಟ್ಟ ಪದ್ಧತಿ. ಈ ಕುಟುಂಬ ರಾಜಕಾರಣವನ್ನು ನಿರ್ನಾಮ ಮಾಡಿ ಎಂದು ಬಿ.ಎಸ್ ಮಲ್ಲಿಕಾರ್ಜುನಯ್ಯ ಕರೆ ನೀಡಿದರು.

Intro:ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಮತ್ತು ಎಂ.ಪಿ ಬಸವರಾಜು ಅವರು ತಾವು ಮಾಡಿರುವ ಕಾರ್ಯಗಳನ್ನು ಜನರ ಮುಂದೆ ಇಟ್ಟು ಮತಯಾಚನೆ ಮಾಡಿ, ಅದನ್ನು ಬಿಟ್ಟು ತಮ್ಮ ಕಾರ್ಯಕರ್ತರ ಮೂಲಕ ಹಣ, ಹೆಂಡ ಹಂಚಿ ಮತಯಾಚನೆ ಮಾಡಬೇಡಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಎಸ್ ಮಲ್ಲಿಕಾರ್ಜುನಯ್ಯ ಸವಾಲು ಹಾಕಿದರು.

Body:ಭಾರತ ದೇಶ ಇಂದು ಅತ್ಯಂತ ಸ ಸಂಧಿಗ್ಧ ಪರಿಸ್ಥಿತಿಯಲ್ಲಿದೆ, ಅಭಿವೃದ್ಧಿಯ ವಿಚಾರವಾಗಿ, ರಾಜಕೀಯದ ವಿಚಾರವೇ ಆಗಲಿ ಎಲ್ಲ ದೃಷ್ಟಿಕೋನದಿಂದಲೂ ಆತಂಕಕಾರಿ ಪರಿಸ್ಥಿತಿಯಲ್ಲಿದೆ.
ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ದೇಶವನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ, ಪ್ರತಿ ಹಂತದಲ್ಲೂ ರಾಜಕಾರಣ ಕಲುಷಿತಗೊಳ್ಳುತ್ತಿದೆ, ಏಕೆಂದರೆ ಅವರಲ್ಲಿರುವ ಸ್ವಾರ್ಥ ಗುಣಗಳಿಂದ, ಕುಟುಂಬ ರಾಜಕಾರಣ, ಸ್ವಹಿತಾಸಕ್ತಿಗಳಿಂದ ಹಣ ಮತ್ತು ಹೆಂಡವನ್ನು ಹಂಚಿ ಪ್ರತಿಯೊಬ್ಬ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ.
ಭಾರತದಲ್ಲಿ ಮತದಾರರು ಭ್ರಷ್ಟರಾಗಿಲ್ಲ, ಅಧಿಕಾರದ ಲಾಲಸೆಗಾಗಿ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಆರೀತಿ ಮಾಡಿವೆ.
ಜನಸಾಮಾನ್ಯರಾಗಿ ಸ್ಪರ್ಧಿಸಿ ಅಧಿಕಾರ ಪಡೆದ ನಂತರದ ದಿನಗಳಲ್ಲಿ ಇವರೂ ಸಹ ಭ್ರಷ್ಟರಾಗುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಹೋರಾಟಗಾರರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯವನ್ನು ಶುದ್ಧೀಕರಣ ಮಾಡಲು ಮುಂದಾಗಿದೆ ಎಂದರು.
ರಾಜ್ಯದಲ್ಲಿ ಅಂತರ್ಜಲ ಕುಸಿದಿದ್ದು, ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ನೀರಿನ ವಿಷಯ ಪ್ರಸ್ತಾಪಿಸುವ ಈ ರಾಜಕಾರಣಿಗಳು ತಮ್ಮ ಸ್ವಹಿತಾಸಕ್ತಿಗಾಗಿ ತುಮಕೂರಿನ ಜನರನ್ನು ಬಳಸಿಕೊಳ್ಳುತ್ತಿದ್ದಾರೆ, ಕಳೆದ ಮೂರು ದಶಕದಿಂದ ಇವರೆಲ್ಲರೂ ಅಧಿಕಾರ ಪಡೆದುಕೊಂಡು ಆಡಳಿತ ನಡೆಸಿದವರು, ಆದರೆ ಇಲ್ಲಿಯವರೆಗೂ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾರು ಕಾರ್ಯನಿರ್ವಹಿಸಿಲ್ಲ, ತುಮಕೂರು ಜಿಲ್ಲೆಗೆ 22 ಟಿಎಂಸಿ ನೀರು ಸಾಕಾಗುತ್ತದೆ ಆದರೆ ಅದನ್ನು ಸರಿಯಾಗಿ ಬಿಡುತ್ತಿಲ್ಲ ಎಂದು ದೂರಿದರು.

Conclusion:ಇಂದು ಹಣ ಇರುವವರು, ಜಾತಿ ಬಕ ಇದ್ದವರು ಚುನಾವಣೆ ಎದುರಿಸುತ್ತಿದ್ದಾರೆ, ಇಡೀ ದೇಶವನ್ನು ಹಣ ಮತ್ತು ಜಾತಿ ಆಧಾರದ ಮೇಲೆ ವಿಘಟನೆ ಮಾಡಲಾಗುತ್ತಿದೆ.
ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತನೆ ಮಾಡುತ್ತಿದ್ದಾರೆ. 80, 90 ವಯಸ್ಸಾದವರು ನಾವೇ ರಾಜಕಾರಣ ಮಾಡಬೇಕು, ನಮ್ಮ ನಂತರ ಮಕ್ಕಳು, ಮಕ್ಕಳ ನಂತರ ಮೊಮ್ಮಕ್ಕಳು ಎಂಬುದು ಎಂತಹ ಕೆಟ್ಟ ಪದ್ಧತಿ, ಈ ಕುಟುಂಬ ರಾಜಕಾರಣವನ್ನು ನಿರ್ನಾಮ ಮಾಡಬೇಕಿದೆ ಎಂದು ಬಿ.ಎಸ್ ಮಲ್ಲಿಕಾರ್ಜುನಯ್ಯ ತಿಳಿಸಿದರು.

ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.