ETV Bharat / state

ತುಮಕೂರು : ಡ್ರಾಗರ್‌ನಿಂದ ಪೊಲೀಸರ ಮೇಲೆ ಹಲ್ಲೆಗೈದ ಮರ್ಡರ್ ಕೇಸ್ ಆರೋಪಿಗೆ ಗುಂಡೇಟು

ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ ಆರೋಪಿಯನ್ನು ಹಿಡಿಯಲು ಯತ್ನಿಸಿದ ವೇಳೆ ಆರೋಪಿ ವಿಕಾಸ್ ಹಠಾತ್ತಾಗಿ ಎಎಸ್ಐ ಪರಮೇಶ್ವರ್ ಅವರ ಮೇಲೆ ಡ್ರಾಗರ್​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಓರ್ವ ಪೊಲೀಸ್​ ಎಡಗೈ ತೋಳಿಗೆ ಗಾಯವಾಗಿದೆ..

The cops fired at the accused of murder case
ತುಮಕೂರು: ಹತ್ಯೆ ಪ್ರಕರಣದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು
author img

By

Published : Dec 6, 2020, 9:13 AM IST

Updated : Dec 6, 2020, 11:56 AM IST

ತುಮಕೂರು : ಹತ್ಯೆ ಪ್ರಕರಣದ ಆರೋಪಿಯೊಬ್ಬ ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾಗ, ಪ್ರಾಣ ರಕ್ಷಣೆಗೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿರುವ ಘಟನೆ ಇಲ್ಲಿನ ಅಜ್ಜಪ್ಪನಹಳ್ಳಿಯಲ್ಲಿ ನಡೆದಿದೆ.

ಇತ್ತೀಚೆಗೆ ತುಮಕೂರು ನಗರದಲ್ಲಿ ರೌಡಿಶೀಟರ್ ಆರ್‌ಎಕ್ಸ್ ಮಂಜ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮೂರು ಪೊಲೀಸ್ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮುಂಜಾನೆ 5:30ರ ವೇಳೆ ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿನ ಅಜ್ಜಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಮುದಾಯ ಭವನದಲ್ಲಿದ್ದ ಆರೋಪಿ ವಿಕಾಸ್​ನನ್ನು ಬಂಧಿಸಲು ಪೊಲೀಸರು ತೆರಳಿದ್ದರು.

ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ ಆರೋಪಿಯನ್ನು ಹಿಡಿಯಲು ಯತ್ನಿಸಿದ ವೇಳೆ ಆರೋಪಿ ವಿಕಾಸ್ ಹಠಾತ್ತಾಗಿ ಎಎಸ್ಐ ಪರಮೇಶ್ವರ್ ಅವರ ಮೇಲೆ ಡ್ರಾಗರ್​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಓರ್ವ ಪೊಲೀಸ್​ ಎಡಗೈ ತೋಳಿಗೆ ಗಾಯವಾಗಿದೆ.

ತುಮಕೂರು: ಹತ್ಯೆ ಪ್ರಕರಣದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ಈ ಸುದ್ದಿಯನ್ನೂ ಓದಿ: ರಸ್ತೆ ಅಪಘಾತ : ಟ್ರ್ಯಾಕ್ಟರ್ ಹಾಯ್ದು ವ್ಯಕ್ತಿ ಸಾವು

ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆಗೆ ಮುಂದಾಗಿದ್ದ. ಸ್ಥಳದಲ್ಲಿದ್ದ ಪಿಎಸ್ಐ ನವೀನ್ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದರು. ಆದ್ರೆ, ಅವರ ಮಾತನ್ನು ಲೆಕ್ಕಿಸದೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ತಕ್ಷಣ ಪಿಎಸ್ಐ ನವೀನ್ ಆರೋಪಿ ವಿಕಾಸ್ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿರುವ ಆರೋಪಿ ಮತ್ತು ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Dec 6, 2020, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.