ETV Bharat / state

ಕೆಲವೇ ದಿನಗಳಲ್ಲಿ ಮಧ್ಯಂತರ ಚುನಾವಣೆ ಬರಲಿದೆ: ಟಿ ಬಿ ಜಯಚಂದ್ರ ಭವಿಷ್ಯ

ಟಿ ಬಿ ಜಯಚಂದ್ರ ಈವರೆಗೆ ಒಟ್ಟು 9 ಚುನಾವಣೆಗಳನ್ನು ಎದುರಿಸಿದ್ದಾರೆ. ಅದರಲ್ಲಿ ಆರು ಬಾರಿ ಗೆದ್ದು, ಮೂರು ಬಾರಿ ಸೋಲು ಕಂಡಿದ್ದಾರೆ. ಆದರೆ ಸೋಲು ಕಂಡ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಗಳು ಎದುರಾಗಿವೆ. ಈ ಸರ್ಕಾರ ಕೂಡ ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

tb-jayachandra-talk-about-future-state-by-election
ಕೆಲವೇ ದಿನಗಳಲ್ಲಿ ಮಧ್ಯಂತರ ಚುನಾವಣೆ ಬರಲಿದೆ: ಟಿಬಿ ಜಯಚಂದ್ರ ಭವಿಷ್ಯ..
author img

By

Published : Oct 8, 2020, 4:36 PM IST

ತುಮಕೂರು: ಸುಮಾರು ನಾಲ್ಕು ದಶಕಗಳಿಂದ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ರಾಜಕಾರಣಿ ಟಿ ಬಿ ಜಯಚಂದ್ರ. ಅವರು ಚುನಾವಣೆ ಸೋತ ಅವಧಿಯಲ್ಲಿ ಮಧ್ಯಂತರ ಚುನಾವಣೆಗಳು ಎದುರಾಗಿವೆ. ಹೀಗಾಗಿ ಈ ಬಾರಿಯೂ ಮಧ್ಯಂತರ ಚುನಾವಣೆ ಬರುವುದು ಖಚಿತ ಎಂಬ ಭವಿಷ್ಯ ನುಡಿದಿದ್ದಾರೆ ಕಾಂಗ್ರೆಸ್​ ಅಭ್ಯರ್ಥಿ.

ಕೆಲವೇ ದಿನಗಳಲ್ಲಿ ಮಧ್ಯಂತರ ಚುನಾವಣೆ ಬರಲಿದೆ: ಟಿಬಿ ಜಯಚಂದ್ರ ಭವಿಷ್ಯ..

ಟಿ ಬಿ ಜಯಚಂದ್ರ ಇದುವರೆಗೂ 9 ಚುನಾವಣೆಗಳನ್ನು ಎದುರಿಸಿದ್ದಾರೆ. ಅದರಲ್ಲಿ ಆರು ಬಾರಿ ಗೆದ್ದು, ಮೂರು ಬಾರಿ ಸೋಲು ಕಂಡಿದ್ದಾರೆ. ಆದರೆ ಸೋಲು ಕಂಡ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಗಳು ಎದುರಾಗಿವೆ. 1983ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು, ಆದರೆ 1985 ರಲ್ಲಿ ಮಧ್ಯಂತರ ಚುನಾವಣೆ ಎದುರಾಯಿತು.

ಇನ್ನು 2004ರಲ್ಲಿ ಪರಾಭವಗೊಂಡಿದ್ದರು, ಆ ಸಂದರ್ಭದಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಮಧ್ಯಂತರ ಚುನಾವಣೆ ಎದುರಾಯಿತು. 2018ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಟಿ ಬಿ ಜಯಚಂದ್ರ ಇದೀಗ ಉಪ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ. ಇದು ನಾನು ಕಂಡಂತಹ ಅನುಭವವಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಟಿ ಬಿ ಜಯಚಂದ್ರ ಚುನಾವಣೆಗಳಲ್ಲಿ ಸೋಲು ಕಂಡರೆ ಸರ್ಕಾರಗಳು ಪತನಗೊಂಡು ಮಧ್ಯಂತರ ಚುನಾವಣೆ ಎದುರಾಗಲಿದೆ ಎಂಬ ಮಾತುಗಳು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅಲ್ಲದೆ ರಾಜ್ಯದ ಬಿಜೆಪಿ ಸರ್ಕಾರ ಶೀಘ್ರದಲ್ಲೇ ಪತನಗೊಂಡು ಚುನಾವಣೆ ನಡೆಯಲಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.