ETV Bharat / state

ತುಮಕೂರಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಕಾರ್ಯಕ್ರಮ - undefined

ಲಿಂಗ್ಯಕ್ಯರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಕಾರ್ಯಕ್ರಮ ಸಿದ್ದೇಶ್ವರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಕಾರ್ಯಕ್ರಮ
author img

By

Published : Apr 1, 2019, 9:38 PM IST

ತುಮಕೂರು: ಲಿಂಗೈಕ್ಯರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಕಾರ್ಯಕ್ರಮವನ್ನು ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ನಂತರ ಮಾತನಾಡಿ ಶ್ರೀ ಮಠ ಮತ್ತು ಅರಮನೆಯ ನಡುವೆ ಇರುವ ಸಂಬಂಧ ಅನನ್ಯವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ರಾಜ್ಯದಲ್ಲಿ ಅನೇಕ ನಾಯಕರು ಹೆಸರು ಮಾಡಿದ್ದಾರೆ. ಅದರಲ್ಲಿ ಮೊದಲನೆ ಸಾಲಿನಲ್ಲಿ ಬರುವವರು ಶಿವಕುಮಾರ ಸ್ವಾಮೀಜಿಯವರು. ನಮಗೆ ಜೀವನದಲ್ಲಿ ಹೇಗೆ ನಡೆಯಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ಅವರ ಕಾಯಕ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ತಿಳಿಸಿದರು.

ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಕಾರ್ಯಕ್ರಮ

ಉಜ್ಜಯಿನಿಯ ಶ್ರೀ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹಣದ ಮಾಲೀಕನಾಗುವ ಮೊದಲು ಮನದ ಜ್ಞಾನದ ಮಾಲೀಕನಾಗುವಂತೆ ಪ್ರತಿಯೊಬ್ಬರಿಗೂ ಶ್ರೀಗಳು ಆಶಿಸುತ್ತಿದ್ದರು. ಶ್ರೀಗಳು ಬಡವ ಶ್ರೀಮಂತ ಎಂದು ಭೇದ- ಭಾವ ಮಾಡದೆ ಎಲ್ಲರಿಗೂ ಒಂದೇ ರೀತಿಯಾಗಿ ಆಶೀರ್ವಾದ ನೀಡುತ್ತಿದ್ದರು. ಶ್ರೀಗಳಲ್ಲಿ ತಂದೆ- ತಾಯಿಯ ಮಮತೆ, ಹಾರೈಸುವ ಗುಣ, ಎಲ್ಲಾ ಮಕ್ಕಳನ್ನು ಒಂದೇ ರೀತಿ ನೋಡುವ ದೃಷ್ಟಿಯಿತ್ತು. ಆದುದರಿಂದಲೇ ಇಂದು ಜಗತ್ತಿನ ಶ್ರೇಷ್ಠ ಶರಣರಲ್ಲಿ ಸಿದ್ದಗಂಗಾ ಶ್ರೀಗಳು ಒಬ್ಬರಾಗಿದ್ದಾರೆ. ಶ್ರೀಗಳ ಜನ್ಮ ದಿನೋತ್ಸವವನ್ನು ಅಂತಾರಾಷ್ಟ್ರೀಯ ದಾಸೋಹ ದಿನ ಎಂದು ಘೋಷಿಸಬೇಕು ಎಂದು ಅಭಿಪ್ರಾಯಪಟ್ಟರು.

ಉಡುಪಿ ಪೇಜಾವರ ಶ್ರೀಗಳು ಮಾತನಾಡಿ ಶ್ರೀಗಳ ಜೀವನ ಪವಾಡ, ಅದ್ಭುತ. ಬದುಕಿನ ಕೊನೆಯವರೆಗೂ ಕ್ರಿಯಾಶೀಲರಾಗಿ ಯತಿಗಳಿಗೆ ಆದರ್ಶ ಪುರುಷರಾದವರು.
ಮಠ ಎಂದರೆ ವಿದ್ಯಾರ್ಥಿ ನಿಲಯ, ಮಠ ಎಂದರೆ ಹೇಗಿರಬೇಕು ಎಂದು ಜಗತ್ತಿಗೆ ಸಾರಿದ ಶ್ರೀಗಳ ಸಾಧನೆ ಅಪಾರ. ಶ್ರೀಗಳು ರಾಷ್ಟ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ್ದು, ಅನೇಕ ಉತ್ತಮ ವಿದ್ಯಾರ್ಥಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಕಾರ್ಯವೈಖರಿ ನೋಡಿದರೆ ಬೆರಗು ಮೂಡಿಸುತ್ತದೆ. ಸಮಾಜ ಕೊಟ್ಟ ಕಾಣಿಕೆಯನ್ನು, ಸಮಾಜಕ್ಕೆ ಹಿಂದಿರುಗಿಸುವ ಕಾರ್ಯ ಶ್ರೀಗಳು ಮಾಡಿದ್ದಾರೆ. ಅವರಿಗೆ ಭಾರತರತ್ನ ಅಲ್ಲ, ಮಾನವ ರತ್ನ ಎಂಬ ಬಿರುದು ಬೇಕಿದೆ ಎಂದರು.

ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಗಳು ಎಂದೂ ಸಹ ಜನ್ಮ ದಿನವನ್ನು ಆಚರಿಸಬೇಕೆಂದು ಆಸೆ ಪಟ್ಟವರಲ್ಲ. ಆದರೆ ಆ ಕಾರ್ಯಕ್ರಮದ ಮೂಲಕ ಬೇರೆ-ಬೇರೆ ಸಮಾಜಮುಖಿಯ ಕಾರ್ಯಕ್ರಮಗಳು ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ಹವಾಮಾನ ವೈಪರಿತ್ಯಗಳಿಂದ ಪರಿಸರವನ್ನು ರಕ್ಷಣೆ ಮಾಡಿ ಎಲ್ಲರೂ ಸಹ ಒಬ್ಬೊಬ್ಬರು ಒಂದೊಂದು ಸಸಿ ನೆಡುವ ಮೂಲಕ ಆ ಸಸಿಗೆ ಶ್ರೀಗಳ ಹೆಸರನ್ನಿಟ್ಟು ಅವುಗಳನ್ನು ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಮಠದ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಅನೇಕ ಮಠಾಧೀಶರನ್ನು ಸನ್ಮಾನಿಸಲಾಯಿತು.

Intro:ತುಮಕೂರು: ಡಾ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಮೊದಲ ವರ್ಷದ 112ನೇ ಡಾ. ಶ್ರೀಗಳ ಜಯಂತಿ ಕಾರ್ಯಕ್ರಮವನ್ನು ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

Body:ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಮಠ ಮತ್ತು ಅರಮನೆಯ ನಡುವೆ ಇರುವ ಸಂಬಂಧ ಅನನ್ಯವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ರಾಜ್ಯದಲ್ಲಿ ಅನೇಕ ನಾಯಕರು ಹೆಸರು ಮಾಡಿದ್ದಾರೆ, ಅದರಲ್ಲಿ ಮೊದಲನೆ ಸಾಲಿನಲ್ಲಿ ಬರುವವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು, ನಮಗೆ ಜೀವನದಲ್ಲಿ ಹೇಗೆ ನಡೆಯಬೇಕು ಎಂದು ಶ್ರೀಗಳು ತಿಳಿಸಿದ್ದಾರೆ, ಅವರ ಕಾಯಕ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ತಿಳಿಸಿದರು.
ಉಜ್ಜಯಿನಿಯ ಶ್ರೀ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹಣದ ಮಾಲೀಕನಾಗುವ ಮೊದಲು, ಮನದ ಜ್ಞಾನದ ಮಾಲೀಕನಾಗುವಂತೆ ಪ್ರತಿಯೊಬ್ಬರಿಗೂ ಶ್ರೀಗಳು ಆಶಿಸುತ್ತಿದ್ದರು. ಶ್ರೀಗಳು ಬಡವ ಶ್ರೀಮಂತ ಎಂದು ಪರಿಗಣಿಸದೇ ಭೇದ ಭಾವ ಮಾಡದೆ ದಾನ ಕೊಟ್ಟವರಿಗೆ, ಕೊಡದೇ ಇರುವವರಿಗೆ ಎಲ್ಲರಿಗೂ ಒಂದೇ ರೀತಿಯ ಆಶೀರ್ವಾದ ನೀಡುತ್ತಿದ್ದರು.
ದಿನ ದಲಿತ ಬಡ ಮಕ್ಕಳಿಗೆ ಪಂಚ ಆಕಾರ ನೀಡಿದವರು, ಶ್ರೀಗಳಲ್ಲಿ ತಂದೆ ತಾಯಿಯ ಮಮತೆ, ಹಾರೈಸುವ ಗುಣ ಎಲ್ಲಾ ಮಕ್ಕಳನ್ನು ಒಂದೇ ರೀತಿ ನೋಡುವ ದೃಷ್ಟಿಯಿತ್ತು, ಆದುದರಿಂದಲೇ ಇಂದು ಜಗತ್ತಿನ ಶ್ರೇಷ್ಠ ಶರಣರಲ್ಲಿ ಸಿದ್ದಗಂಗಾ ಶ್ರೀಗಳು ಒಬ್ಬರಾಗಿದ್ದಾರೆ. ಶ್ರೀಗಳ ಜನ್ಮ ದಿನೋತ್ಸವವನ್ನು ಅಂತರರಾಷ್ಟ್ರೀಯ ದಾಸೋಹ ದಿನ ಎಂದು ಘೋಷಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಉಡುಪಿಯ ಪೇಜಾವರ ಮಠದ ಶ್ರೀಗಳು ಮಾತನಾಡಿ ಶ್ರೀಗಳ ಜೀವನ ಪವಾಡ, ಅದ್ಭುತ. ಬದುಕಿನ ಕೊನೆಯವರೆಗೂ ಕ್ರಿಯಾಶೀಲರಾಗಿ ಯತಿಗಳಿಗೆ ಆದರ್ಶ ಪುರುಷರಾದವರು.
ಮಠ ಎಂದರೆ ವಿದ್ಯಾರ್ಥಿ ನಿಲಯ, ಮಠ ಎಂದರೆ ಹೇಗಿರಬೇಕು ಎಂದು ಜಗತ್ತಿಗೆ ಸಾರಿದ ಶ್ರೀಗಳ ಸಾಧನೆ ಅಪಾರ. ಶ್ರೀಗಳು ರಾಷ್ಟ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ್ದು. ಅನೇಕ ಉತ್ತಮ ವಿದ್ಯಾರ್ಥಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ.
ಅವರ ಕಾರ್ಯವೈಖರಿ ನೋಡಿದರೆ ಬೆರಗು ಮೂಡಿಸುತ್ತದೆ, ಸಮಾಜ ಕೊಟ್ಟ ಕಾಣಿಕೆಯನ್ನು, ಸಮಾಜಕ್ಕೆ ಹಿಂದಿರುಗಿಸುವ ಕಾರ್ಯ ಶ್ರೀಗಳು ಮಾಡಿದ್ದಾರೆ, ಅವರಿಗೆ ಭಾರತರತ್ನ ಅಲ್ಲ ಮಾನವ ರತ್ನ ಎಂಬ ಬಿರುದು ಸಲ ಬೇಕಿದೆ ಎಂದರು.
ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಗಳು ಎಂದು ಸಹ ಜನ್ಮ ದಿನವನ್ನು ಆಚರಿಸಬೇಕೆಂದು ಆಸೆ ಪಟ್ಟವರಲ್ಲ, ಆದರೆ ಆ ಕಾರ್ಯಕ್ರಮದ ಮೂಲಕ ಬೇರೆ-ಬೇರೆ ಸಮಾಜಮುಖಿಯ ಕಾರ್ಯಕ್ರಮಗಳು ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು.
ಹವಾಮಾನ ವೈಪರೀತ್ಯಗಳಿಂದ ಪರಿಸರವನ್ನು ರಕ್ಷಣೆ ಮಾಡಿ, ಎಲ್ಲರೂ ಸಹ ಒಬ್ಬೊಬ್ಬರು ಒಂದೊಂದು ಸಸಿ ನೆಡುವ ಮೂಲಕ ಆ ಸಸಿಗೆ ಶ್ರೀಗಳ ಹೆಸರನ್ನಿಟ್ಟು ಅವುಗಳನ್ನು ಬೆಳೆಸುವ ಕಾರ್ಯ ಮಾಡಬೇಕಿದೆ. ಎಪ್ರಿಲ್ ಒಂದರಂದು ಸರ್ಕಾರ ದಾಸೋಹ ದಿನವನ್ನಾಗಿ ಆಚರಣೆ ಮಾಡದಿದ್ದರೂ, ತಾವೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ದಾಸೋಹ ದಿನವನ್ನು ಆಚರಣೆ ಮಾಡಿ ಎಂದು ಭಕ್ತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವರಾತ್ರಿ ದೇಶಿ ಕೇಂದ್ರದ ಸ್ವಾಮೀಜಿ ಮಾತನಾಡಿ, ಸಿದ್ದಗಂಗೆ ಭೂಪಟದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದರು ಶ್ರೀಗಳು, ಸಮುದ್ರ ಹೇಗಿತ್ತು ಎಂದರೆ ಅದಕ್ಕೆ ಸಮುದ್ರವನ್ನೇ ಉದಾಹರಣೆಯನ್ನಾಗಿ ನೀಡುತ್ತೇವೆ ಹೊರತು, ಅದಕ್ಕೆ ಪರ್ಯಾಯವಾಗಿ ಮತ್ತೊಂದನ್ನು ಹೇಳುವುದಿಲ್ಲ. ಹಾಗೆಯೇ ಶ್ರೀಗಳು ಹೇಗೆ ಬದುಕಿದ್ದರೂ ಎಂದರೆ ಅವರಿಗಾಗಿ ಬೇರೆ ಉದಾಹರಣೆ ನೀಡಲು ಸಾಧ್ಯವಿಲ್ಲ ಎಂದು ಶ್ರೀ ಗಳು ಬದುಕಿದ್ದ ರೀತಿಯನ್ನು ತಿಳಿಸಿದರು.
ಇತ್ತಿಚಿನ ದಿನಗಳಲ್ಲಿ ಪ್ರಕೃತಿಯ ವಿಕೋಪದಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅದರ ಬಗ್ಗೆ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡಬೇಕು. ಹುಟ್ಟಿದಾಗ ಹೆಸರು ಇರುವುದಿಲ್ಲ, ಸತ್ತಾಗ ಹೆಸರು ಇರುತ್ತದೆ ಆ ರೀತಿ ಬಾಳಿದವರಲ್ಲಿ ಶ್ರೀಗಳು ಎಂದರು.

Conclusion:ಕಾರ್ಯಕ್ರಮದಲ್ಲಿ ವಿವಿಧ ಮಠದ ಮಠಧೀಶರು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಅನೇಕ ಮಠಧೀಶರನ್ನು ಸನ್ಮಾನಿಸಲಾಯಿತು.

ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.