ತುಮಕೂರು: ಭಾರತ ದೇಶದ ಸೊಸೆ ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ ಮರ್ಯಾದೆ ಇಲ್ಲದ ಕಾಂಗ್ರೆಸ್ ಪಕ್ಷದವರು ದೇಶ ವಿಭಜನೆ ಮಾಡುವ ರೀತಿಯಲ್ಲಿ ಪೌರತ್ವದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಾಡುವ ಮೂಲಕ ದೇಶ ವಿಭಜನೆ ಮಾಡುವ ಕಾರ್ಯ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದರು.
ಭಾರತ ದೇಶದ ಮುಸಲ್ಮಾನರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಪೌರತ್ವದ ಬಗ್ಗೆ ಮನಮೋಹನ್ ಸಿಂಗ್ ಅಂದಿನ ಕಾಲದಲ್ಲಿಯೇ ಕಾಯ್ದೆಗಳನ್ನು ರೂಪಿಸಿದ್ದರು. ಆದರೆ ಈಗ ಅದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ ಅಷ್ಟೇ. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ನಮ್ಮ ದೇಶದ ಸೊಸೆಯಾಗಿ ಬಂದಾಗ ದೇಶದ ಪೌರತ್ವವನ್ನು ನೀಡಿದೆವು. ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.