ETV Bharat / state

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ ಹಿನ್ನೆಲೆ... 11 ಗುತ್ತಿಗೆದಾರರಿಗೆ 1.53 ಕೋಟಿ ರೂ ದಂಡ...

author img

By

Published : Mar 2, 2020, 9:31 PM IST

ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೆ ವಿಫಲವಾಗಿರುವ 11 ಗುತ್ತಿಗೆದಾರರಿಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಭೂ ಬಾಲನ್ ಒಟ್ಟು1.53 ಕೋಟಿ ರೂ. ಗಳ ದಂಡ ವಿಧಿಸಿದ್ದಾರೆ.

smart-city-works-delay-113-contractors-fined-rs-1-dot-53-crore-by-bhu-bhalan
ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ ಹಿನ್ನೆಲೆ... 11 ಗುತ್ತಿಗೆದಾರರಿಗೆ 1.53 ಕೋಟಿ ರೂ ದಂಡ

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೆ ವಿಫಲವಾಗಿರುವ 11 ಗುತ್ತಿಗೆದಾರರಿಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಭೂ ಬಾಲನ್ ಒಟ್ಟು1.53 ಕೋಟಿ ರೂ. ಗಳ ದಂಡ ವಿಧಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಅಲ್ಲದೆ ಕಾಮಗಾರಿ ಚುರುಕು ಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. ಅಲ್ಲದೇ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ನೀಡಲಾಗಿದೆ. ಆದೇಶ ಉಲ್ಲಂಘಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲನ್ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ ಹಿನ್ನೆಲೆ... 11 ಗುತ್ತಿಗೆದಾರರಿಗೆ 1.53 ಕೋಟಿ ರೂ ದಂಡ...

ನಗರದ ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಆರ್. ಎಂ. ಎನ್ ಇನ್ಫ್ರಸ್ಟ್ರಕ್ಚರ್ಸ್ ಗೆ 50,41,630 ರೂ, ಅಶೋಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಸಿದ್ಧಾರ್ಥ ಸಿವಿಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಗೆ 26,97,720 ರೂ., ಅಮಾನಿ ಕೆರೆ ಏರಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಆರ್. ಎಂ. ಎನ್. ಇನ್ಫ್ರಸ್ಟ್ರಕ್ಚರ್ಸ್ ಗೆ 23,42,262 ರೂ. ಡಾಕ್ಟರ್ ರಾಧಾಕೃಷ್ಣ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಶ್ರೀನಿವಾಸ ಕನ್ಸೆಕ್ಷನ್ ಪ್ರೈವೇಟ್ ಲಿಮಿಟೆಡ್ ಗೆ 16,42,295 ರೂ. ಭಗವಾನ್ ಮಹಾವೀರ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಶ್ರೀ ಸುಧಾಕರ ಪೆರಿಟಾಲ ಅವರಿಗೆ 10,31,460 ರೂ ದಂಡ ವಿಧಿಸಿದ್ದಾರೆ.

ಹಾಗೆಯೇ ಮಹಿಳಾ ಥೀಮ್ ಪಾರ್ಕ್ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜೇಗೌಡ ಅಂಡ್ ಕಂಪನಿಗೆ 6,77,377 ರೂ. ಟ್ರಾಮಾ ಸೆಂಟರ್ ಕಾಮಗಾರಿ ನಡೆಸುತ್ತಿರುವ ಕೆಬಿಆರ್ ಇನ್ ಫ್ರಾಟೆಕ್ ಲಿಮಿಟೆಡ್ ಗೆ 5,28,000 ರೂ. , ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಸುತ್ತಿರುವ ಶ್ರೀನಿವಾಸ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಗೆ 5,65,119 ರೂ, ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಲು ಆಲದ ಮರಗಳ ವಿಶಾಲ ರಾಜಮಾರ್ಗದ ನಿರ್ಮಾಣ ಮತ್ತು ಅಭಿವೃದ್ಧಿ ಕೈಗೆತ್ತಿಕೊಂಡಿರುವ ಎ1 ಕನ್ಸ್ಟ್ರಕ್ಷನ್ ಗೆ 4,19,625 ರೂ. ಮೂರು ಬರ್ತ್ಡೇ ಅಭಿವೃದ್ಧಿ ಕಾಮಗಾರಿ ತೆಗೆದುಕೊಂಡಿರುವ ಸಾವಿತ್ರಿ ಶ ಇನ್ಫ್ರಾ ಎಂಜಿನಿಯರ್ ಅವರಿಗೆ 1,26,200 ರೂ. , ಮಹಾತ್ಮಗಾಂಧಿ ಕ್ರೀಡಾಂಗಣದ ಅಭಿವೃದ್ಧಿ (ಪಿಎಂಸಿ ವತಿಯಿಂದ ನಕ್ಷೆಗಳ ವಿಳಂಬಕ್ಕಾಗಿ) ಬೆಂಗಳೂರಿನ ಸಿಎಡಿಡಿ ಫಾರಂಗೆ ಗೆ 3,08,060 ರೂ. ಗಳ ದಂಡ ವಿಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.