ತುಮಕೂರು : ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಿದ್ದಗಂಗಾ ಮಠದಲ್ಲಿ ಲಕ್ಷಾಂತರ ಮಕ್ಕಳಿಗೆ ದಾರಿದೀಪವಾಗಿದ್ದರು. ಬಿಡುವಿನ ವೇಳೆಯಲ್ಲಿ ಶಿವಧ್ಯಾನ, ಸಾಮಾಜಿಕ ಕಳಕಳಿಯನ್ನು ತಮ್ಮದೇ ಆದ ರೀತಿಯಲ್ಲಿ ಪತ್ರಗಳ ಮೂಲಕ ವ್ಯಕ್ತಪಡಿಸಿದ್ದರು. ಅಂತಹ ಸಾವಿರಾರು ಪತ್ರಗಳು ಇಂದಿಗೂ ಶ್ರೀ ಸಿದ್ದಗಂಗಾ ಮಠದಲ್ಲಿ ಸಿಗುತ್ತಲೇ ಇವೆ.
ಶಿವ ಧ್ಯಾನವಲ್ಲದೆ ಗುರುವಿನ ಸ್ಥಾನಮಾನಗಳು ಹೇಗಿರಬೇಕೆಂಬುದನ್ನು ಸಿದ್ದಗಂಗೆಯ ಮಹಾಪುರುಷ ಸುಂದರವಾಗಿ ಬಣ್ಣಿಸಿದ್ದು ಹೀಗೆ :
ಗುರುವಿನಲ್ಲಿ ಇರಬೇಕಾದದ್ದು ನಡೆನುಡಿಗಳ ಸಮನ್ವಯ..
ಅಂತರಂಗ-ಬಹಿರಂಗ ಶುದ್ಧವಾದ ಸರ್ವಾಚರ ಸಂಘ...
ಹೀಗೆ ಒಂದಲ್ಲ, ಎರಡಲ್ಲ ಸಾವಿರಾರು ಪತ್ರಗಳು ದೊರೆತಿವೆ.