ETV Bharat / state

ಶಿರಾ ಉಪಕದನ: ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಪ್ರಚಾರ

ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ನನ್ನ ಸ್ನೇಹಿತರೇ. ಆದ್ರೆ, ವೈಯಕ್ತಿಕ ಸಂಬಂಧಗಳೇ ಬೇರೆ, ರಾಜಕೀಯವೇ ಬೇರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Yathindra Siddaramaiah
ಶಿರಾ ಉಪಕದನ: ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಪ್ರಚಾರ
author img

By

Published : Oct 19, 2020, 5:03 PM IST

Updated : Oct 19, 2020, 5:48 PM IST

ತುಮಕೂರು: ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರವಾಗಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಶಿರಾ ನಗರದಲ್ಲಿ ಪ್ರಚಾರ ನಡೆಸಿದರು.

ಶಿರಾ ನಗರ, ಗೌಡಗೆರೆಯಲ್ಲಿ ಕೈ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಯತೀಂದ್ರ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮತ್ತು ಯತೀಂದ್ರ ಸಿದ್ದರಾಮಯ್ಯ ಆಪ್ತ ಸ್ನೇಹಿತರು. ರಾಜೇಶ್ ಗೌಡರು ನನ್ನ ಸ್ನೇಹಿತರೇ, ವೈಯಕ್ತಿಕ ಸಂಬಂಧಗಳೇ ಬೇರೆ ರಾಜಕೀಯವೇ ಬೇರೆ ಎಂದು ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಶಿರಾ ಉಪಕದನ: ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಪ್ರಚಾರ

ಅವ್ರ ತಂದೆ ಕಾಂಗ್ರೆಸ್​ನಿಂದ ಲೋಕಸಭಾ ಸದಸ್ಯರಾಗಿದ್ರು, ಲ್ಯಾಬ್ಅನ್ನು ಕೂಡ ಜೊತೆಗೆ ಮಾಡಿದ್ವಿ, ಆಮೇಲೆ ಆಚೆ ಬಂದಿದ್ದೇವೆ. ಕಾಂಗ್ರೆಸ್​ನಿಂದ ಟಿಕೆಟ್ ಕೊಡಿ ಅಂತಾ ಕೇಳಿಕೊಂಡಿದ್ರು. ಆದ್ರೆ ಟಿ.ಬಿ. ಜಯಚಂದ್ರ ಅವ್ರು ನಮ್ಮ ಹಿರಿಯರು, ಅವ್ರೇ ಅಭ್ಯರ್ಥಿ ಅಂತಾ ಹೇಳಿದ್ದೆವು. ಟಿಕೆಟ್ ಕೊಡೋಕೆ ಆಗಲ್ಲಾ, ಪಕ್ಷಕ್ಕೆ ಸೇರಿ ಕೆಲಸ ಮಾಡಿ ಅಂತಾ ಹೇಳಿದ್ದೆವು. ಅವ್ರಿಗೆ ಅವಸರಕ್ಕೆ ಟಿಕೆಟ್ ಬೇಕಿತ್ತು, ಹಾಗಾಗಿ ಬಿಜೆಪಿ ಸೇರಿದ್ರು. ಅವ್ರು ಸ್ನೇಹಿತರು ಅನ್ನೋ ಕಾರಣಕ್ಕೆ ಪಕ್ಷ ನಿಷ್ಠೆ ಬಿಡೋಕೆ ಆಗಲ್ಲಾ ಎಂದು ಯತೀಂದ್ರ ಸ್ಪಷ್ಟಪಡಿಸಿದ್ದಾರೆ.

Last Updated : Oct 19, 2020, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.