ETV Bharat / state

ಮಳೆಯಿಂದಾಗಿ ಡಿಸಿಎಂ ಪರಮೇಶ್ವರ್​​​ ಜನಸಂಪರ್ಕ ಸಭೆ ರದ್ದು - undefined

ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯು ದಿಢೀರ್ ಮಳೆಯಿಂದಾಗಿ ಸ್ಥಗಿತಗೊಂಡಿತು.

ಡಿಸಿಎಂ ಡಾ.ಜಿ.ಪರಮೇಶ್ವರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
author img

By

Published : Jun 22, 2019, 11:45 PM IST

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯು ದಿಢೀರ್ ಮಳೆಯಿಂದಾಗಿ ಸ್ಥಗಿತಗೊಂಡಿತು.

ಮಳೆಯಿಂದಾಗಿ ಡಿಸಿಎಂ ಜನಸಂಪರ್ಕ ಸಭೆ ರದ್ದು

ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಸಮಾರಂಭದ ಆರಂಭಕ್ಕೆ ಸರಿಯಾಗಿ ಮಳೆ ಕೂಡ ಆರಂಭವಾಯಿತು. ಇದರಿಂದಾಗಿ ಅಲ್ಲಿ ನೆರೆದಿದ್ದ ಬಹುತೇಕ ಜನರು ಮಳೆ ಪರಿಣಾಮ ಆಶ್ರಯ ಪಡೆಯಲು ಕುರ್ಚಿಗಳನ್ನು ತಲೆ ಮೇಲೆ ಹೊತ್ತುಕೊಂಡು ಅಲ್ಲಿಂದ ದೂರ ಸರಿದರು. ವೇದಿಕೆಯಲ್ಲಿದ್ದ ಪರಮೇಶ್ವರ್ ಜನಸಂಪರ್ಕ ಸಭೆಯನ್ನು ಮುಂದೂಡಿರುವುದಾಗಿ ಘೋಷಣೆ ಮಾಡಿದರು.

ತುಮಕೂರು ನಗರದಿಂದ ತೋವಿನಕೆರೆ ಗ್ರಾಮಕ್ಕೆ ಆಗಮಿಸುವ ಮಾರ್ಗ ಮಧ್ಯೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಿರೇತೊಟ್ಲುಕೆರೆ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಗ್ರಾಮದಲ್ಲಿ ಸಾರ್ವಜನಿಕರಿಗೆ ನೀಡಲಾಗಿರುವ ಹಕ್ಕುಪತ್ರದ ಸಮಸ್ಯೆಯನ್ನು ಪರಿಹರಿಸುವಂತೆ ಜನರು ಮನವಿ ಮಾಡಿದರು.

ಅದೇ ರೀತಿ ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪರಮೇಶ್ವರ್ ವೀಕ್ಷಿಸಿದರು. ರಾಜೀವ್ ಗಾಂಧಿ ನಗರದಲ್ಲಿ ನಡೆಯುತ್ತಿರುವ ಕೆಲವು ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.

Intro:ಪರಮೇಶ್ವರ್ ಜನಸಂಪರ್ಕ ಸಭೆಗೆ ಮಳೆ ಅಡ್ಡಿ.....

ತುಮಕೂರು
ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿ ಮುಖ್ಯಮಂತ್ರಿ ಜಿ ಪರಮೇಶ್ವರ್ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯು ದಿಡೀರ್ ಮಳೆಯಿಂದಾಗಿ ಸ್ಥಗಿತಗೊಂಡಿತು. ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಸಭೆಯ ಆರಂಭಕ್ಕೂ ಮುನ್ನ ದೇಶಭಕ್ತಿಗೀತೆ ಪ್ರಾರಂಭವಾದೊಡನೆ ಮಳೆ ಕೂಡ ಆರಂಭವಾಯಿತು. ಇದರಿಂದಾಗಿ ಅಲ್ಲಿ ನೆರೆದಿದ್ದ ಬಹುತೇಕ ಜನರು ಮಳೆಯಿಂದ ಆಶ್ರಯ ಪಡೆಯಲು ಕುರ್ಚಿಯನ್ನು ತಲೆಮೇಲೆ ಹೊತ್ತುಕೊಂಡು ಅಲ್ಲಿಂದ ದೂರ ಸರಿದರು. ಇನ್ನು ಕೆಲವರು ಶಾಮಿಯಾನ ದಲ್ಲಿಯೇ ಭಾಷೆ ಪಡೆದು ದೇಶಭಕ್ತಿಗೀತೆ ಪೂರ್ಣಗೊಳ್ಳುವವರೆಗೂ ನಿಂತಿದ್ದರು. ವೇದಿಕೆಯಲ್ಲಿ ಕುಳಿತು ನಿಂತಿದ್ದ ಪರಮೇಶ್ವರ್ ಜನಸಂಪರ್ಕ ಸಭೆಯನ್ನು ಮುಂದೂಡಿರುವುದಾಗಿ ಘೋಷಣೆ ಮಾಡಿದರು.

ಇನ್ನೂ ತುಮಕೂರು ನಗರದಿಂದ ತೋವಿನಕೆರೆ ಗ್ರಾಮಕ್ಕೆ ಆಗಮಿಸುವ ಮಾರ್ಗಮಧ್ಯೆ ಉಪಮುಖ್ಯಮಂತ್ರಿ ಪರಮೇಶ್ವರ್ ಹಿರೇತೊಟ್ಲುಕೆರೆ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಗ್ರಾಮದಲ್ಲಿ ಜನರಿಗೆ ನೀಡಲಾಗಿರುವ ಹಕ್ಕು ಪತ್ರದ ಸಮಸ್ಯೆ ಕುರಿತು ಪರಿಹರಿಸುವಂತೆ ಮನವಿ ಮಾಡಿದರು. ಅದೇ ರೀತಿ ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಕಾಮಗಾರಿ ಯೋಜನೆಯನ್ನು ಪರಮೇಶ್ವರ್ ವೀಕ್ಷಿಸಿದರು. ಅದೇ ರೀತಿ ರಾಜೀವ್ ಗಾಂಧಿ ನಗರದಲ್ಲಿ ಕೂಡ ನಡೆಯುತ್ತಿರುವ ಕೆಲವು ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜೊತೆಯಲ್ಲಿದ್ದರು.

Body:ತುಮಕೂರು

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.