ತುಮಕೂರು : ಚಲಿಸುತ್ತಿದ್ದ ಖಾಸಗಿ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 22 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಹೂವಿನಕಟ್ಟೆ ಬಳಿ ನಡೆದಿದೆ.
ಚೇಳೂರಿನಿಂದ ಮಂಚಲದೊರೆ ಕಡೆ ಹೋಗುತ್ತಿದ್ದ ಬಸ್ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ರಸ್ತೆಯಲ್ಲಿ ಇಳಿಜಾರಿದ್ದ ಕಾರಣ ಅತಿ ವೇಗವಾಗಿ ಬಸ್ ತೆರಳಿ ಡಿಕ್ಕಿ ಹೊಡೆದಿದೆ. ಇನ್ನು ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.