ತುಮಕೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 30 ಟ್ರಾಕ್ಟರ್ ಲೋಡ್ ಮರಳು ಮತ್ತು ಟ್ರಾಕ್ಟರ್ವೊಂದನ್ನು ಪಾವಗಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾವಗಡ ಪಟ್ಟಣದ ಟೀಚರ್ಸ್ ಕಾಲೊನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಟ್ರ್ಯಾಕ್ಟರ್ ಲೋಡ್ ಮರಳು, ನಾರಾಯಣ ರೆಡ್ಡಿ ಲೇಔಟ್ನಲ್ಲಿ ಸಂಗ್ರಹಿಸಿಟ್ಟಿದ್ದ 10 ಲೋಡ್ ಮರಳು ಮತ್ತು ಟಿಎನ್ ಪೇಟೆಯಲ್ಲಿದ್ದ ಒಂದು ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಮೂರು ಪ್ರಕರಣಗಳನ್ನು ಪಾವಗಡ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.