ತುಮಕೂರು: ಪ್ರಥಮ ಸೆಮಿಸ್ಟರ್ ಮುಗಿದರು ಶಾಲೆಗೆ ಶಿಕ್ಷಕರು ಹಾಜರಾಗಿಲ್ಲ ಎಂದು ಆರೋಪಿಸಿ ಶಿಕ್ಷಕರ ವಿರುದ್ಧ ಪೋಷಕರು, ವಿದ್ಯಾರ್ಥಿಗಳು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಾಸಲಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 130 ಮಕ್ಕಳು ದಾಖಲಾಗಿದ್ದು, 5 ಶಿಕ್ಷಕರನ್ನು ನೇಮಿಸಲಾಗಿದೆ. ಆದ್ರೆ, ಮೂವರು ಶಿಕ್ಷಕರು ಬರುತ್ತಿಲ್ಲ. ಕಚೇರಿ ಕೆಲಸಕ್ಕೆ ಒಬ್ಬರು, ಉಳಿದ ಒಬ್ಬರು ಶಿಕ್ಷಕರು ಹಾಜರಾಗುತ್ತಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕುಂಟಿತವಾಗುತ್ತಿದೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಆಂಜನೇಯ ಆಕ್ರೋಶ ಹೊರಹಾಕಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸುವವರೆಗೂ ಶಾಲೆಯ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.