ತುಮಕೂರು: ಮಧುಗಿರಿ ಪಟ್ಟಣದಲ್ಲಿ ಆಯೋಜಿಸಿದ್ಧ ಕಾಂಗ್ರೆಸ್ ಸಮಾವೇಶದಲ್ಲಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ.
ಓದಿ: ಸಿಡಿ ನಕಲಿ, ಹನಿಟ್ರ್ಯಾಪ್ ಯತ್ನ ನಡೆದಿದೆ, ಸಿಬಿಐ ತನಿಖೆಗೆ ವಹಿಸಿ : ಬಾಲಚಂದ್ರ ಜಾರಕಿಹೊಳಿ
ಮಧುಗಿರಿ ಪಟ್ಟಣದಲ್ಲಿ ಆಯೋಜಿಸಿದ್ಧ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ವ್ಯವಸ್ಥೆಯ ಪರ ಇರೋರು. ಬದಲಾವಣೆ ಆಗಲೇಬಾರದು ಎನ್ನೋದು, ಮೇಲ್ವರ್ಗದ ಜನ ಇದನ್ನೇ ಬಯಸುತ್ತಾರೆ ಎಂದರು. ದುಡ್ಡು ಕೊಟ್ಟು ಶಾಸಕರ ಖರೀದಿ ಮಾಡಿ ಹಿಂಬಾಗಿಲಿನಿಂದ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. ಲಜ್ಜೆಗೆಟ್ಟ ಮುಖ್ಯಮಂತ್ರಿ ಬಡವರ ಪರ ಕೆಲಸ ಮಾಡಲು ಸಾಧ್ಯನಾ ಎಂದರು.
ಮಧುಗಿರಿಯಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆಯಾ, ಹಾಲಿ ಶಾಸಕರು ಕ್ಷೇತ್ರದಲ್ಲಿ ಸಿಕ್ಕಲ್ಲಿ ಕೆರೆಯೋದೆ ಕೆಲಸ ಮಾಡಿಕೊಂಡಿದ್ದಾರೆ. ಕಾರಣವೇ ಇಲ್ಲದೆ ರಾಜಣ್ಣನನ್ನ ಸೋಲಿಸಿದರು. ಲಜ್ಜೆಗೆಟ್ಟ, ಮಾನ ಮರ್ಯಾದೆ ಇಲ್ಲದ ಮುಖ್ಯಮಂತ್ರಿ ಅಂದರೆ ಯಡಿಯೂರಪ್ಪ. ಜನರ ಮಧ್ಯೆ ಕೆಲಸ ಮಾಡುವ ಅವಕಾಶ ನಿಮಗೆ ಸಿಕ್ಕಿದೆ. ಜನಗಳಿಗೆ ಹತ್ತಿರವಾಗಿ ಕೆಲಸ ಮಾಡುವ ಅವಕಾಶ ನಿಮಗಿದೆ ಎಂದರು.
ಇವರಿಗೆ ಬಡವರ ಅಭಿವೃದ್ದಿ ಮಾಡಲು ಸಾಧ್ಯವಾ, ಲಜ್ಜೆಗಟ್ಟ ಮುಖ್ಯಮಂತ್ರಿ ಇವರು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಅಕ್ಕಿಯನ್ನು 7 ಕೆಜಿ ಯಿಂದ 5 ಕೆಜಿ ಮಾಡಿದ್ದಾರೆ. ಯಡಿಯೂರಪ್ಪ ಮನೆಯಿಂದ ತಂದು ಕೊಟ್ಟಿದ್ದಾರಾ ಎಂದರು.
ಅಭಿವೃದ್ದಿ ಕೇಳಿದರೆ ಕೊರೊನಾ ನೆಪ ಹೇಳುತ್ತಾರೆ. ನೀವು ಬಿಟ್ಟೋಗಿ ನಾವು ಬಂದು ಸರಿ ಮಾಡ್ತೀವಿ. ಸರ್ಕಾರದ ಬಳಿ ದುಡ್ಡಿಲ್ಲ, ನಾನು ಸಿಎಂ ಆಗಿದ್ದಾಗ ಒಂದೇ ಒಂದು ಚೆಕ್ ಬೌನ್ಸ್ ಆಗಿರಲಿಲ್ಲ ಎಂದರು. ಅಧಿಕಾರಕ್ಕೆ ಬಂದು 2 ವರ್ಷ ಆಯ್ತು ಯಾಕೆ ರೈತರ ಸಾಲ ಮನ್ನಾ ಮಾಡಿಲ್ಲ ಎಂದರು.
ಯಡಿಯೂರಪ್ಪಗೆ ಏನ್ ರೋಗ ಬಂದಿದೆ ಸಾಲ ಮನ್ನ ಮಾಡಲು, ಒಂದು ಕ್ಷಣ ಇರಬಾರ್ದು ಅಧಿಕಾರದಲ್ಲಿ. ಕೊರೊನಾ ರೋಗಕ್ಕೆ ಎಷ್ಟು ದುಡ್ಡು ಖರ್ಚು ಮಾಡಿದ್ರಿ ಎಂದು ಕೇಳಿದೆ. 4400 ಕೋಟಿ ರೂ. ಎಂದು ಹೇಳಿದರು, ಅದರಲ್ಲಿ ಅರ್ಧ ನುಂಗಿ ಬಿಟ್ಟಿದ್ದಾರೆ. ಯಾರಿಗಾದರೂ ಪರಿಹಾರ ಕೊಟ್ಟಿದ್ದಾರಾ, ರಾಜ್ಯ ಲೂಟಿ ಹೊಡೆಯುತ್ತಿದ್ದಾರೆ ಎಂದರು.