ತುಮಕೂರು: ಆನ್‌ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಇಎನ್ ಠಾಣೆ ಪೊಲೀಸರು ನಗರದ ಕ್ಯಾತ್ಸಂದ್ರದ ಬಳಿ ಬಂಧಿಸಿದ್ದಾರೆ.
ತರುಣ್, ರೇವಂತ್, ಸಂಜಯ್, ಚರಣ್ ಬಂಧಿತ ಆರೋಪಿಗಳು. ಮೊಬೈಲ್ ಮೂಲಕ ಸ್ಪೆಕ್ಟಾಕ್ಯುಲರ್ ಎಂಬ ಆ್ಯಪ್ ಬಳಸಿ ಕುದುರೆ ರೇಸ್ ಆಟಗಳಲ್ಲಿ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಅನಧಿಕೃತ ಜೂಜಾಟ ಆಡಿಸಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ರೇಸ್ ಕಾರ್ಡ್, ಹಣ ಕಟ್ಟಿಸಿಕೊಳ್ಳುತ್ತಿದ್ದ ಚೀಟಿಗಳೂ ಸೇರಿದಂತೆ 11,400 ರೂ. ಹಾಗೂ 4 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ.