ETV Bharat / state

ಶಿಕ್ಷಣದ ಮೇಲೆ ಕೊರೊನಾ ದಾಳಿ: ಆನ್​ಲೈನ್​ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು...! - ಸ್ಮಾರ್ಟ್ ಫೋನ್

ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್​, ಟ್ಯಾಬ್​ಗಳು, ಲ್ಯಾಪ್​ಟಾಪ್​ಗಳ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ಆದರೆ ಇದರಿಂದಾಗಿ ವಿದ್ಯಾರ್ಥಿ ಸಮೂಹ ಸಮಸ್ಯೆಗೆ ಒಳಗಾಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆನ್​ಲೈನ್​ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

author img

By

Published : Jun 28, 2020, 7:28 AM IST

ತುಮಕೂರು: ಕೊರೊನಾ ವೈರಸ್​ನಿಂದಾಗಿ ಪ್ರತೀ ಕ್ಷೇತ್ರವೂ ಇಕ್ಕಟ್ಟಿಗೆ ಸಿಲುಕಿದೆ. ಮುಖ್ಯವಾಗಿ ಇದರಿಂದ ಶೈಕ್ಷಣಿಕ ಕ್ಷೇತ್ರವೂ ಹೊರತಾಗಿಲ್ಲ. ಮನೆಯಲ್ಲಿ ಉಳಿದಿರುವ ವಿದ್ಯಾರ್ಥಿಗಳು ಆನ್​ಲೈನ್​ ಕ್ಲಾಸ್​ಗಳ ಮೊರೆ ಹೋಗುವಂತಾಗಿದೆ. ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್​, ಟ್ಯಾಬ್​ಗಳು, ಲ್ಯಾಪ್​ಟಾಪ್​ಗಳ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ಆದರೆ, ಇದರಿಂದಾಗಿ ತಮಗೆ ಗೊತ್ತಿಲ್ಲದೇ ವಿದ್ಯಾರ್ಥಿ ಸಮೂಹ ಸಮಸ್ಯೆಗೆ ಒಳಗಾಗುವಂತಾಗಿದೆ.

ಆನ್​ಲೈನ್​ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ಈಗಾಗಲೇ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್​ಲೈನ್ ತರಗತಿ ನಡೆಸಬಾರದು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇನ್ನುಳಿದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸರ್ಕಾರವಿದೆ.

ಈ ಕುರಿತು ಶಿಕ್ಷಣ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಸಾಮಾನ್ಯವಾಗಿ ತುಂಟಾಟವಿರುತ್ತದೆ. ಅವರಿಗೆ ಆನ್​ಲೈನ್​ ತರಗತಿಗಳನ್ನು ನಡೆಸಿದರೆ ಪ್ರಯೋಜನವಿಲ್ಲ. ಏಕೆಂದರೆ ಅವರು ಗಮನವಿಟ್ಟು ಕೇಳುವುದಿಲ್ಲ. ಅಷ್ಟೇ ಅಲ್ಲದೆ ವಿದ್ಯಾರ್ಥಿಯ ಮನಸ್ಸಿನ ಮೇಲೆ ಒತ್ತಡ ಹೇರಿದಂತಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಆನ್​ಲೈನ್ ತರಗತಿಗಳನ್ನು ಪರಿಚಯಿಸಿದರೆ ಸಾಮಾಜಿಕ ಜಾಲತಾಣಕ್ಕೆ ಮಕ್ಕಳು ಆಕರ್ಷಿತರಾಗುತ್ತಾರೆ. ಆನ್​ಲೈನ್​ ಶಿಕ್ಷಣ ನೀಡಿದರೆ ಸಾಮಾಜಿಕ ಚಟುವಟಿಕೆಯ ಅರಿವು ಇರುವುದಿಲ್ಲ. ಗುಂಪಿನಲ್ಲಿ ಕಲಿಯುವುದು, ಒಡನಾಟ, ಗೌರವ ಭಾವನೆ ಇವೆಲ್ಲವೂ ಇರುವುದಿಲ್ಲ. ಸಣ್ಣ ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂವಾದ ಸಮೀಪದಲ್ಲಿ ಇರಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.