ETV Bharat / state

ಚಿಕಿತ್ಸೆ ದೊರೆಯದೆ ವೃದ್ಧೆ ಸಾವು: ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಡಿ.ಸಿ ಗೌರಿಶಂಕರ್ ತರಾಟೆ

ಹೊನ್ನುಡಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಸಕ ಡಿ.ಸಿ ಗೌರಿಶಂಕರ್
author img

By

Published : Sep 21, 2019, 10:58 PM IST

ತುಮಕೂರು : ವೈದ್ಯರ ಕೊರತೆ ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಅನಾರೋಗ್ಯಪೀಡಿತ ವೃದ್ಧೆ ಸಾವನ್ನಪ್ಪಿರುವುದಾಗಿ ವೃದ್ಧೆ ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿಗಳನ್ನ ತರಾಟೆಗೆ ತಗೆದುಕೊಂಡ ಶಾಸಕ ಡಿ.ಸಿ ಗೌರಿಶಂಕರ್

ತುಮಕೂರು ಜಿಲ್ಲೆಯ ಹೊನ್ನುಡಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೊನ್ನುಡಿಕೆ ಗ್ರಾಮದ ತಿಮ್ಮಕ್ಕ (60) ಮೃತ ದುರ್ದೈವಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಡಿ.ಸಿ ಗೌರಿಶಂಕರ್ ವೈದ್ಯರ ಕೊರತೆ ಇರುವುದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನ ತರಾಟೆಗೆ ತಗೆದುಕೊಂಡಿದ್ದಾರೆ.

ಖಾಯಂ ವೈದ್ಯರ ನೇಮಕಕ್ಕೆ ಡಿಹೆಚ್ಓಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಗೌರಿಶಂಕರ್ ಮೃತ ವೃದ್ಧೆಯ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರದ ಚೆಕ್​ ವಿತರಿಸಿದರು.

ಇದಲ್ಲದೇ ಹೊನ್ನುಡಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲೂ ರೋಗಿಗಳಿಗೆ ಅನುಕೂಲವಾಗುವಂತೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Intro:Body:ವೈದ್ಯರ ಕೊರತೆ ಹಿನ್ನೆಲೆ..... ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟ ವೃದ್ಧೆ ಆರೋಪ...... ಶಾಸಕ ಗೌರಿಶಂಕರ್ ಸಾಂತ್ವನ......

ತುಮಕೂರು
ಅನಾರೋಗ್ಯದಿಂದ ಬಳಲುತ್ತಿದ್ದರು ವೃದ್ಧೆಗೆ ವೈದ್ಯಕೀಯ ಸಿಬ್ಬಂದಿ ನೀಡಿದ್ದ ಚಿಕಿತ್ಸೆಯಲ್ಲಿ ಏರುಪೇರು ಆದ ಹಿನ್ನೆಲೆ ಮೃತಪಟ್ಟಿದ್ದಾರೆ ಆಕೆಯ ಸಂಬಂಧಿಗಳು ಆರೋಪಿಸಿದ್ದಾರೆ. ತುಮಕೂರು ಜಿಲ್ಲೆ ಹೊನ್ನುಡಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಹೊನ್ನುಡಿಕೆ ಗ್ರಾಮದ ತಿಮ್ಮಕ್ಕ (60) ಮೃತ ದುದೈವಿಯಾಗಿದ್ದಾರೆ. ವಿಶೇಷ ತಿಳಿದು ಸ್ಥಳಕ್ಕೆ ಶಾಸಕ ಡಿ.ಸಿ.ಗೌರಿಶಂಕರ್ ವೈದ್ಯರ ಕೊರತೆ ಇರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.
ಅಲ್ಲದೆ ಖಾಯಂ ವೈದ್ಯರ ನೇಮಕಕ್ಕೆ ಡಿಹೆಚ್ಓ ಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಗೌರಿಶಂಕರ್ ಮೃತ ವೃದ್ಧೆಯ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು. ಇದಲ್ಲದೆ ಹೊನ್ನುಡಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲೂ ರೋಗಿಗಳಿಗೆ ಅನುಕೂಲವಾಗುವಂತೆ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.