ETV Bharat / bharat

ಜಾರ್ಖಂಡ್‌ ಚುನಾವಣೆ: ರಾಂಚಿಯಲ್ಲಿ ಡ್ರೋಣ್‌ ಕಣ್ಗಾವಲಿನಲ್ಲಿ ಮತದಾನ - POLICE USE DRONES FOR SURVEILLANCE

ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಗೆ ಶೇ.13.04ರಷ್ಟು ಮತದಾನ ದಾಖಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

jharkhand-polls-police-use-drones-for-surveillance-in-ranchi-with-voting-underway-for-first-phase
ಸಂಗ್ರಹ ಚಿತ್ರ (ETV Bharat)
author img

By ANI

Published : Nov 13, 2024, 11:45 AM IST

ರಾಂಚಿ(ಜಾರ್ಖಂಡ್​​): ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ರಾಜಧಾನಿ ರಾಂಚಿಯಲ್ಲಿ ಸಮಗ್ರ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಮತಗಟ್ಟೆಗಳ ಸುತ್ತ ಪೊಲೀಸರು ಡ್ರೋನ್​ ಮೂಲಕ​ ಕಣ್ಗಾವಲು ಹಾಕಿದ್ದಾರೆ. ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಮತದಾನ ಸಾಗುತ್ತಿದೆ.

ಈ ಕುರಿತು ಮಾತನಾಡಿದ ನಗರ ಎಸ್​ಪಿ ರಾಜ್​ ಕುಮಾರ್​ ಮೆಹ್ತಾ, "ಜನರು ತಮ್ಮ ಹಕ್ಕು ಚಲಾಯಿಸಬೇಕು. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಾಂತಿಯುತವಾಗಿ ಮತದಾನ ಮಾಡಿ. ಭದ್ರತಾ ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮೊದಲು ಮತದಾನಕ್ಕೆ ಅವಕಾಶ ನೀಡಲು ಸಹಕರಿಸಬೇಕು" ಎಂದು ಅವರು ಮನವಿ ಮಾಡಿದರು.

ರಾಜ್ಯದ 15 ಜಿಲ್ಲೆಗಳಲ್ಲಿನ 43 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಕಣದಲ್ಲಿ 683 ಅಭ್ಯರ್ಥಿಗಳಿದ್ದಾರೆ. ಈ ಪೈಕಿ 73 ಮಂದಿ ಮಹಿಳೆಯರು. ಸಂಜೆ 5 ಗಂಟೆಯವರೆಗೆ ಸಾಗಲಿರುವ ಮತದಾನ ಶಾಂತಿಯುತವಾಗಿ ನಡೆಯಲು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. 31 ಕ್ಷೇತ್ರದಲ್ಲಿರುವ 950 ಸೂಕ್ಷ್ಮ ಪ್ರದೇಶದಲ್ಲಿ ಸಂಜೆ 4 ಗಂಟೆಗೆ ಮತದಾನ ಮುಗಿಯಲಿದೆ. 200 ಭದ್ರತಾ ಪಡೆಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ನೇಮಿಸಲಾಗಿದೆ.

ಅಖಾಡದಲ್ಲಿರುವ ಘಟಾನುಘಟಿಗಳು: ಸೆರೈಕೆಲಾದಲ್ಲಿ ಮಾಜಿ ಸಿಎಂ ಚಂಪೈ ಸೊರೇನ್​ (ಬಿಜೆಪಿ), ಜೇಮ್ಶೆಡ್​ಪುರ ಪೂರದ್ಲಿಯಿಂದ ಅಜೊಯ್​ ಕುಮಾರ್​ (ಕಾಂಗ್ರೆಸ್​), ಮಾಜಿ ಸಿಎಂ ರಘುವರ್​ ದಾಸ್​ ಅವರ ಸೊಸೆ ಪೂರ್ಣಿಮಾ ದಾಸ್​ ಸಾಹು, ಜಗನ್ನಾಥಪುರದಲ್ಲಿ ಮಾಜಿ ಸಿಎಂ ಮಧು ಕೊಡಾ ಪತ್ನಿ ಗೀತಾ ಕೊಡಾ, ಕಾಂಗ್ರೆಸ್​ ನಾಯಕ ಸೊನಾ ರಾಮ್​ ಸಿಂಕು ಚುನಾವಣಾ ಅಖಾಡದಲ್ಲಿರುವ ಘಟಾನುಘಟಿಗಳಾಗಿದ್ದಾರೆ.

ಇದನ್ನೂ ಓದಿ: ಪಹಣಿ ಪತ್ರದಲ್ಲಿ ವಕ್ಫ್ ಹೆಸರು ತೆರವು: ನಿಟ್ಟುಸಿರು ಬಿಟ್ಟ ಉಪ್ಪಿನ ಬೆಟಗೇರಿ ರೈತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.