ETV Bharat / state

ನರಸಮ್ಮರ ಸಮಾಜ ಮುಖಿಯ ಕಾರ್ಯ ನಮ್ಮೆಲ್ಲರಿಗೂ ಆದರ್ಶಪ್ರಾಯ: ಸಂಸದ ಜಿ.ಎಸ್ ಬಸವರಾಜು - undefined

ದಿವಂಗತ ಸೂಲಗಿತ್ತಿ ನರಸಮ್ಮ ಅವರ ಕಾರ್ಯ ಮೆಚ್ಚಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ಸ್ಮಾರಕಕ್ಕೆ ನಗರದ ಸ್ಥಳ ನಿಗದಿಯಾಗಿದ್ದು, ಶೀಘ್ರದಲ್ಲಿ ಸ್ಮಾರಕ ನಿರ್ಮಿಸಲು ಎಲ್ಲರೂ ಶ್ರಮಿಸೋಣ ಎಂದು ಸಂಸದ ಜಿ ಎಸ್ ಬಸವರಾಜು ತಿಳಿಸಿದರು.

ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ
author img

By

Published : Jun 16, 2019, 6:42 PM IST

ತುಮಕೂರು: ನಗರದ ಕನ್ನಡ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಿ. ಡಾ. ಸೂಲಗಿತ್ತಿ ನರಸಮ್ಮ ಅವರ 99ನೇ ಹುಟ್ಟುಹಬ್ಬದ ಅಂಗವಾಗಿ ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.

ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ತುಮಕೂರು

ಸೂಲಗಿತ್ತಿ ನರಸಮ್ಮ ಅವರ ಸ್ಮರಣಾರ್ಥ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಚಾರ. ನರಸಮ್ಮ ಅವರ ಸಮಾಜಮುಖಿ ಕಾರ್ಯ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾದದ್ದು. ಕೇವಲ ತುಮಕೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶದಲ್ಲಿ ಅವರ ಕಾರ್ಯಕ್ಕೆ ಗೌರವ ದೊರೆತಿದೆ. ಹಾಗಾಗಿಯೇ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸಂಸದ ಜಿ ಎಸ್​ ಬಸವರಾಜು ಬಣ್ಣಿಸಿದರು.

ನಗರದ 11ನೇ ವಾರ್ಡ್​ನಲ್ಲಿ ಸರಸಮ್ಮರ ಸ್ಮಾರಕಕ್ಕೆ ಸ್ಥಳ ನಿಗದಿಯಾಗಿದ್ದು, ಸ್ಮಾರಕ ನಿರ್ಮಾಣಕ್ಕೆ ಅವರ ಕುಟುಂಬದವರು, ಸರ್ಕಾರ, ಬಂಧುಗಳು ಎಲ್ಲರೂ ಶ್ರಮಿಸೋಣ ಎಂದು ಸಂಸದ ಜಿ.ಎಸ್ ಬಸವರಾಜು ಕರೆ ನೀಡಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೀಲಾ, ಜೋಪಕ ಸುಭದ್ರ, ಗಿನ್ನಿ ಮಹಿ ಅವರನ್ನು ಸನ್ಮಾನಿಸಲಾಯಿತು.

Intro:ತುಮಕೂರು: ದಿವಂಗತ ಸೂಲಗಿತ್ತಿ ನರಸಮ್ಮ ನವರ ಕಾರ್ಯವನ್ನು ಮೆಚ್ಚಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಸ್ಮಾರಕಕ್ಕೆ ನಗರದ 11ನೇ ವಾರ್ಡ್ ನಲ್ಲಿ ಸ್ಥಳ ನಿಗದಿಯಾಗಿದ್ದು, ಶೀಘ್ರದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಸಂಸದ ಜಿ.ಎಸ್ ಬಸವರಾಜು ತಿಳಿಸಿದರು.

Body:ತುಮಕೂರಿನ ಕನ್ನಡ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸೂಲಗಿತ್ತಿ ನರಸಮ್ಮ ಅವರ 99ನೇ ಹುಟ್ಟುಹಬ್ಬದ ಅಂಗವಾಗಿ ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೂಲಗಿತ್ತಿ ನರಸಮ್ಮ ಅವರ ನೆನಪಿನಾರ್ಥವಾಗಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಚಾರ. ನರಸಮ್ಮ ಅವರ ಸಮಾಜ ಮುಖಿಯ ಕಾರ್ಯ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾದದ್ದು, ಕೇವಲ ತುಮಕೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ, ನೆರೆಯ ಆಂಧ್ರದಲ್ಲಿ ಅವರ ಕಾರ್ಯಕ್ಕೆ ಅಭಿನಂದನೆ ದೊರೆತಿದೆ. ಹಾಗಾಗಿಯೇ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಜೊತೆಗೆ ನಗರದ 11ನೇ ವಾರ್ಡ್ ನಲ್ಲಿ ಅವರ ಸ್ಮಾರಕಕ್ಕೆ ಸ್ಥಳ ನಿಗದಿಯಾಗಿದ್ದು, ಸ್ಮಾರಕ ನಿರ್ಮಾಣ ಮಾಡಲು ಅವರ ಕುಟುಂಬದವರು, ಸರ್ಕಾರ, ಬಂಧುಗಳು ಎಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

Conclusion:ವಿವಿಧ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿದ ನೀಲಾ, ಜೋಪಕ ಸುಭದ್ರ, ಗಿನ್ನಿ ಮಹಿ, ಅವರನ್ನು ಸನ್ಮಾನಿಸಲಾಯಿತು.

ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.