ETV Bharat / state

ತುಮಕೂರಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ

ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ಬಾರ್​ನಲ್ಲಿ ಕುಡಿದು ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆದರೆ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ತುಮಕೂರಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ
Murder of a man by throwing a stone over his head at Tumkur
author img

By

Published : Jan 16, 2021, 12:05 PM IST

ತುಮಕೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

man murder
ಕೊಲೆಯಾದ ವ್ಯಕ್ತಿ

ಟೂಡಾ ಲೇಔಟ್‌ನ ಗಂಗಾಧರೇಶ್ವರ ಬಡಾವಣೆಯ ಪ್ರಸಾದ್ (40) ಕೊಲೆಯಾದ ವ್ಯಕ್ತಿ. ಇವರು ಟಿವಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿಕೊಂಡು ಮದ್ಯ ಸೇವಿಸಲು ಬಾರ್​ಗೆ ತೆರಳಿದ್ದರು. ಕುಡಿದು ಪಕ್ಕದ ಬೀಡಾ ಅಂಗಡಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಪ್ರಸಾದ್ ಮೇಲೆ ದಾಳಿ ನಡೆಸಿ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆಗೈದು ಪರಾರಿಯಾಗಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಸಹಜವಾಗಿ ಪ್ರಸಾದ್ ರಾತ್ರಿ ವೇಳೆ ಮನೆಗೆ ಹೋಗದಿದ್ದಾಗ ದೂರವಾಣಿ ಕರೆ ಮಾಡಿ ಮನೆಗೆ ತಿಳಿಸುತ್ತಿದ್ದರಂತೆ. ಆದರೆ ನಿನ್ನೆ ಎಷ್ಟೇ ಬಾರಿ ಕರೆ ಮಾಡಿದರು ಪತಿ ಫೋನ್​ ತೆಗೆಯದಿದ್ದಾಗ ಕುಟುಂಬದವರು ಆರಂತಕಕ್ಕೆ ಒಳಗಾಗಿದ್ದರು. ಬಳಿಕ ಬೆಳಗಿನ ಜಾವ ಪ್ರಸಾದ್​​ ಹುಡುಕುತ್ತಾ ಹೋದವರಿಗೆ ಗಂಗಸಂದ್ರ ಸಮೀಪದ ರಿಂಗ್ ರಸ್ತೆಯಲ್ಲಿರುವ ಚಿಲೋಟ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಅವರ ಶವ ಕಂಡು ಬಂದಿದೆ. ಕೂಡಲೇ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಓದಿ: ಕೂಡಲಸಂಗಮ ಸ್ವಾಮೀಜಿ ಜೊತೆ ಚರ್ಚೆಗೆ ಸಿಎಂ ಸಿದ್ಧರಿದ್ದಾರೆ: ಸಚಿವ ಮುರುಗೇಶ್ ನಿರಾಣಿ

ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.