ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಗ್ರಾಮದಲ್ಲಿ ಕೆರೆಯಲ್ಲಿ ದನದ ಮೈ ತೊಳೆಯಲು ಹೋದ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ತಾಯಿ ರತ್ನಮ್ಮ ಹಾಗೂ ಮಕ್ಕಳಾದ ಚಂದ್ರಿಕಾ, ಚೇತನ್ ಮೃತಪಟ್ಟವರು. ಗ್ರಾಮದ ಕೆರೆಯಲ್ಲಿ ದನಗಳ ಮೈ ತೊಳೆಯಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಪಾರು ಮಾಡಲು ಹೋದ ತಾಯಿ ರತ್ನಮ್ಮ ಕೂಡ ನೀರುಪಾಲಾಗಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.