ETV Bharat / state

ನಾದಿನಿ ಮೇಲೆನೇ ಕಣ್ಣು ಹಾಕಿದ್ದ.. ಆಕೆ ಮದ್ವೆಗೆ ಒಪ್ಪದಿದ್ದಾಗ ಅಪಪ್ರಚಾರ ಮಾಡಿ ಸಿಕ್ಕಿಬಿದ್ದ ಬಾವ!

ರಾಜಶೇಖರ್ ಎಂಬಾತ ಅಪ್ರಾಪ್ತ ಬಾಲಕಿಯಾದ ನನ್ನ ನಾದಿನಿಗೆ ಮದುವೆ ಮಾಡಿದ್ದಾರೆ. 10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ದೂರು ನೀಡಿದ್ದ. ಆದರೆ ಅಸಲಿಗೆ ಆತ ಆಕೆಯನ್ನು ಮದುವೆಯಾಗುವ ಇಚ್ಛೆಯೊಂದಿದ್ದು, ಈ ಬಗ್ಗೆ ಆಕೆಯನ್ನು ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಕ್ಕೆ ಈ ರೀತಿ ಅಪಪ್ರಚಾರ ಮಾಡಿ ಆಕೆಯನ್ನು ವರಿಸುವ ಯೋಚನೆಯೊಂದಿದ್ದ ಎನ್ನಲಾಗಿದೆ.

ಆರೋಪಿ ರಾಜಶೇಖರ್
author img

By

Published : May 4, 2019, 9:43 AM IST

Updated : May 4, 2019, 11:14 AM IST

ತುಮಕೂರು: ನಾದಿನಿ ಮೇಲೆ ಅಕ್ಕನ ಗಂಡನಿಗೆ ವಾಂಛೆ. ಮದುವೆ ಆಗಬೇಕೆಂದು ಆಸೆನೂ ಇಟ್ಕೊಂಡಿದ್ದ. ನಿನ್ ಮೂತಿಗಿಷ್ಟು ಅಂತಾ ಆಕೆ ಬಾವನನ್ನ ಮದುವೆ ಆಗೋದಕ್ಕೆ ಒಪ್ಪಿರಲಿಲ್ಲ. ಇದರಿಂದ ಕುಪಿತಗೊಂಡ ಆತ ತನ್ನ ನಾದಿನಿಯನ್ನ ಹಣಕ್ಕಾಗಿ ಮಾರಾಟ ಮಾಡಲಾಗಿದೆ ಎಂಬ ಕಟ್ಟು ಕಥೆ ಸೃಷ್ಟಿಸಲು ಯತ್ನಿಸಿ ತಾನೇ ತೋಡಿದ್ದ ಬಾವಿಗೆ ಬಿದ್ದಿದ್ದಾನೆ.

ಗುಬ್ಬಿ ತಾಲೂಕಿನ ರಾಜಶೇಖರ್ ಎಂಬಾತನೇ ಆ ಖತರ್ನಾಕ್ ಆಸಾಮಿ. ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿದ್ದಾರೆ. ತನ್ನ ನಾದಿನಿಯನ್ನು ₹ 10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆಂದು ಸುಳ್ಳು ದಾಖಲೆಯನ್ನು ಸೃಷ್ಟಿಸಿ ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ಕೊಟ್ಟಿದ್ದ. ಅಧಿಕಾರಿಗಳು ಪರಿಶೀಲಿಸಿ ಪೂರಕ ವರದಿ ನೀಡುವಂತೆ ಸಹಾಯವಾಣಿಯಿಂದ ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿಗೆ ಪ್ರಕರಣವನ್ನು ರವಾನೆ ಮಾಡಿದ್ದರು.

ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿಯವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ. ಬದಲಾಗಿ ಬೇರೆ ಊರಿಗೆ ಹೋಗಿದ್ದರು. ಅಲ್ಲದೆ ಬಾಲಕಿಯು ರಮೇಶ್ ಎಂಬುವರನ್ನು ಮದುವೆ ಮಾಡಿಕೊಂಡಿದ್ದಾಳೆ ಎಂಬ ದೂರಿನಲ್ಲಿನ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಆ ಊರಿನಲ್ಲಿ ರಮೇಶ್ ಎಂಬ ವ್ಯಕ್ತಿಯೇ ಇರಲಿಲ್ಲ.

ಅಪಪ್ರಚಾರ ಮಾಡಿ ನಾದಿನಿ ವರಿಸಲು ಯತ್ನಿಸಿದ ಮಾವ

ಅಪ್ತಾಪ್ತ ಯುವತಿಯನ್ನು ಮಾರಾಟ ಮಾಡಲಾಗಿದೆಯೆಂಬ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಪರಿಶೀಲಿಸಿದ್ದರು. ಆ ನಂತರ ದಾಖಲೆಯ ಮೂಲ ಪ್ರತಿಯನ್ನು ತೆಗೆದುಕೊಂಡು ತನಿಖೆ ನಡೆಸಬೇಕಿದೆ ಎಂಬ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿತ್ತು.

ಅಲ್ಲದೆ ರಾಜಶೇಖರ್ ಎಂಬ ವ್ಯಕ್ತಿಯು ಕಳೆದ ವರ್ಷ ಯುವತಿಗೆ ಮದುವೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಮತ್ತು ಸಿಡಿಪಿಒ ಪೋಷಕರ ಬಳಿ ತೆರಳಿ ಅಪ್ರಾಪ್ತ ಯುವತಿಗೆ ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆಯನ್ನು ಪೋಷಕರಿಂದ ಬರೆಸಿಕೊಂಡಿದ್ದರು.

ನೊಂದ ಯುವತಿಯ ಹೇಳಿಕೆ :

ಗುಬ್ಬಿ ತಾಲೂಕಿನ ತೋಟದ ಮನೆಯಲ್ಲಿ ಪೋಷಕರೊಡನೆ ವಾಸವಿದ್ದ ನನಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಅಕ್ಕ-ಬಾವ (ರಾಜಶೇಖರ್) ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡಲು ಬಿಟ್ಟಿದ್ದರು. ಆದರೆ, ನನ್ನ ಬಾವ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದರು. ಆ ಹಿನ್ನೆಲೆಯಲ್ಲಿ ವಾಪಸ್ ಪೋಷಕರು ಇದ್ದ ತೋಟದ ಮನೆಗೆ ಬಂದಿದ್ದೆ. ಆದರೂ ಕೂಡ ಬಾವನ ವಿರುದ್ದ ಯಾವುದೇ ಕ್ರಮಕ್ಕೆ ನಾನು ಮುಂದಾಗಿರಲಿಲ್ಲ.

ಆದರೆ, ಪದೇಪದೆ ಬಾವ ರಾಜಶೇಖರ್ ನನ್ನನ್ನು ಮದುವೆ ಮಾಡಿಕೋ ಎಂದು ಪೀಡಿಸುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಇದೀಗ ಸುಳ್ಳು ದಾಖಲೆ ಸೃಷ್ಟಿಸಿ ನನಗೆ ಮದುವೆಯಾಗಿದೆ, ಮಾರಾಟ ಮಾಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವುದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗುಬ್ಬಿ ತಾಲೂಕಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಂರಕ್ಷಣಾ ಅಧಿಕಾರಿಗಳ ಎದುರು ನೊಂದ ಅಪ್ರಾಪ್ತೆ ಹೇಳಿಕೆ ನೀಡಿದ್ದಾಳೆ.

ಪ್ರಕರಣ ಆಲಿಸಿದ ಅಧಿಕಾರಿಗಳು ಬಾವ ರಾಜಶೇಖರ್ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯ ಬಾವನ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಾಜಶೇಖರ್ ಸುಳ್ಳು ದಾಖಲೆ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸ್ಪಷ್ಟಪಡಿಸಿದ್ದಾರೆ.

Intro:Shanthinath h I                            tumkuru         03-4-2019
----------------------------------------------------
File name : kn_tmk_01_03_girl sale lafda_7202233_script_shanthinath
Formate : pkg
--------------------------------------------------------
ನಾದಿನಿ ವರಿಸಲು ಯತ್ನ…….
ಇದಕ್ಕೊಪ್ಪ ಅಪ್ರಾಪ್ತೆಯ ಬಗ್ಗೆ ಅಪಪ್ರಚಾರ ಮಾಡಲು ಹೋಗಿ ತಾನೇ ಸಿಲುಕಿದ ಬಾವ.....
Anchor : ನಾದಿನಿಯನ್ನು ವರಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಬಾವನೊಬ್ಬ ಆಕೆಯನ್ನು ಹಣಕ್ಕಾಗಿ ಮಾರಾಟ ಮಾಡಲಾಗಿದೆ ಕಟ್ಟುಕಥೆ ಸೃಷ್ಟಿಸಲು ಯತ್ನಿಸಿ ತಾನೇ ತೋಡಿದ್ದ ಬಾವಿಗೆ ಬಿದ್ದಿದ್ದಾನೆ.
ಗುಬ್ಬಿ ತಾಲೂಕಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಅಕ್ಕನ ಗಂಡನ ರಾಜಶೇಖರ್ ಎಂಬಾತನೇ ಖತರ್ ನಾಕ್ ಆಸಾಮಿ. ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿದ್ದಾರೆ, 10ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಸುಳ್ಳು ದಾಖಲೆಯೊಂದನ್ನು ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ಕೊಟ್ಟಿದ್ದರು. ಪರಿಶೀಲಿಸಲಿಸಿ ಪೂರಕ ವರದಿ ನೀಡುವಂತೆ ಸಹಾಯವಾಣಿಯಿಂದ ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿಗೆ ರವಾನೆಯಾಗಿತ್ತು.
ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿಯವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ. ಬದಲಾಗಿ ಬೇರೆ ಊರಿಗೆ ಹೋಗಿದ್ದರು. ಅಲ್ಲದೆ ಬಾಲಕಿಯು ರಮೇಶ್ ಎಂಬುವರನ್ನು ಮದುವೆ ಮಾಡಿಕೊಂಡಿದ್ದಾಳೆ ಎಂಬ ದೂರಿನಲ್ಲಿನ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಆ ಊರಿನಲ್ಲಿ ರಮೇಶ್ ಎಂಬ ವ್ಯಕ್ತಿಯೇ ಇರಲಿಲ್ಲ.
ಅಪ್ತಾಪ್ತ ಯುವತಿಯನ್ನು ಮಾರಾಟ ಮಾಡಲಾಗಿದೆಯೆಂಬ ದಾಖಲೆ ಜಿರಾಕ್ಸ್ ಪ್ರತಿಯನ್ನು ಪರಿಶೀಲಿಸಿದ್ದರು. ಆ ನಂತರ ದಾಖಲೆಯ ಮೂಲ ಪ್ರತಿಯನ್ನು ತೆಗೆದುಕೊಂಡು ತನಿಖೆ ನಡೆಸಬೇಕಿದೆ ಎಂಬ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿತ್ತು. ಅಲ್ಲದೆ ರಾಜಶೇಖರ್ ಎಂಬ ವ್ಯಕ್ತಿಯು ಕಳೆದ ವಷಱ ಯುವತಿಗೆ ಮದುವೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ದೂರು ನೀಡಿದ್ದರು, ಅದ್ರ ಆಧಾರದ ಮೇಲೆ ಪೊಲೀಸರು ಮತ್ತು ಸಿಡಿಪಿಒ ಅವರುಗಳು ಪೋಷಕರ ಬಳಿ ತೆರಳಿ ಅಪ್ರಾಪ್ತ ಯುವತಿಗೆ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆಯನ್ನು ಸಹ ಬರೆದುಕೊಟ್ಟಿದ್ದರು.

ನೊಂದ ಯುವತಿಯ ಹೇಳಿಕೆ….
ಗುಬ್ಬಿ ತಾಲೂಕಿನ ತೋಟದ ಮನೆಯಲ್ಲಿ ವಾಸವಿದ್ದು ಪೋಷಕರು, ನನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಅಕ್ಕ ಬಾವ ರಾಜಶೇಖರ್ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡಲು ಬಿಟ್ಟಿದ್ದರು. ಆದರೆ ನನ್ನ ಬಾವ ನನ್ನನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದರು. ಆ ಹಿನ್ನೆಲೆಯಲ್ಲಿ ವಾಪಸ್ ಪೋಷಕರು ಇದ್ದ ತೋಟದ ಮನೆಗೆ ಬಂದಿದ್ದೆ. ಆದ್ರೂ ಕೂಡ ಬಾವನ ವಿರುದ್ದ ಯಾವ್ದೆ ಕ್ರಮ ತೆಗೆದುಕೊಂಡಿರಲಿಲ್ಲ. ಪದೇ ಪದೇ ಬಾವ ರಾಜಶೇಖರ್ ನನ್ನ ಜೊತೆ ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಇದೀಗ ಸುಳ್ಳು ದಾಖಲೆ ಸೃಷ್ಟಿಸಿ ನನಗೆ ಮದುವೆಯಾಗಿದೆ, ಮಾರಾಟ ಮಾಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವುದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗುಬ್ಬಿ ತಾಲೂಕಿನಲ್ಲಿರುವ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಯ ಸಂರಕ್ಷಣಾ ಆಧಿಕಾರಿಗಳ ಎದುರು ನೊಂದ ಯುವತಿ ಸ್ವತಃ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಅಧಿಕಾರಿಗಳು ಬಾವ ರಾಜಶೇಖರ್ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯ ಭಾವನೆ ಮೇರೆಗೆ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಫ್ ಐ ಆರ್ ದಾಖಲು ಮಾಡಿದೆ ಎಂದು ಜಿಲ್ಲಾ ಮಕ್ಕಳು ರಕ್ಷಣಾಧೀಕಾರಿ ವಾಸಂತಿ ಉಪ್ಪಾರ್ ಸ್ಪಷ್ಟಪಡಿಸಿದ್ದಾರೆ.
Body:tumakuruConclusion:
Last Updated : May 4, 2019, 11:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.