ETV Bharat / state

ಪ್ರಜ್ವಲ್ ರೇವಣ್ಣ ನನ್ನ ಕಾಲಿಗೆ ಬೀಳಲು ಬಂದಾಗ ನಾನೇ ತಡೆದೆ: ಶಾಸಕ ವೀರಭದ್ರಯ್ಯ ಸ್ಪಷ್ಟನೆ - ಶಾಸಕ ವೀರಭದ್ರಯ್ಯ ವೈರಲ್​ ವಿಡಿಯೋ ಸುದ್ದಿ

ಶಿರಾ ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರಜ್ವಲ್ ರೇವಣ್ಣನವರ ಕಾಲಿಗೆ ಶಾಸಕ ವೀರಭದ್ರಯ್ಯ ಬೀಳಲು ಮುಂದಾದರು ಎಂಬಂತಹ ವಿಡಿಯೋ ವೈರಲ್​ ಆಗುತ್ತಿದೆ. ಈ ಬಗ್ಗೆ ಶಾಸಕ ವೀರಭದ್ರಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.

mla virabadhraiah clarification on  viral video
ಶಾಸಕ ವೀರಭದ್ರಯ್ಯ ಸ್ಪಷ್ಟನೆ
author img

By

Published : Aug 28, 2020, 10:26 PM IST

ತುಮಕೂರು: ಶಿರಾ ತಾಲೂಕಿನ ಬೂವನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ನನ್ನ ಕಾಲಿಗೆ ಬೀಳಲು ಬಂದಾಗ ಅದನ್ನು ನಾನೇ ತಡೆದದ್ದು ಎಂದು ಶಾಸಕ ವೀರಭದ್ರಯ್ಯ ಸ್ಪಷ್ಟನೆ ನೀಡಿದ್ದಾರೆ.

ಕಾಲಿಗೆ ಬಿದ್ದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ ವೀರಭದ್ರಯ್ಯ
ಈ ಬಗ್ಗೆ ಹೇಳಿಕೆ ನೀಡದ ಅವರು, ಶಾಸಕ ಸತ್ಯನಾರಾಯಣ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಪ್ರಜ್ವಲ್ ರೇವಣ್ಣ ಸಹ ಬಂದಿದ್ದರು. ಅವರನ್ನು ಮಾತನಾಡಿಸಲು ಸಮೀಪ ಹೋದಾಗ ನನ್ನ ಕಾಲಿಗೆ ಬೀಳಲು ಬಂದರು. ಸಂಸದರಿದ್ದೀರಿ ಕಾಲಿಗೆ ಬೀಳಬಾರದು ಎಂದು ಕೈ ಹಿಡಿದು ಮೇಲಕ್ಕೆತ್ತಿದೆ. ಅದೊಂದು ಸೌಜನ್ಯದ ನಡೆ. ಇದಕ್ಕೆ ಅಲ್ಲಿದ್ದಂತಹ ನೂರಾರು ಜನರು ಸಾಕ್ಷಿಯಾಗಿದ್ದರು ಎಂದರು.

ಈ ಘಟನೆಯನ್ನು ವ್ಯತಿರಿಕ್ತವಾಗಿ ವೈರಲ್ ಮಾಡುತ್ತಿರುವುದು ಸರಿಯಲ್ಲ. ಪ್ರಜ್ವಲ್ ರೇವಣ್ಣ ಅವರು ನನ್ನ ಮಗನಿಗೆ ಸಮಾನವಾದ ವಯಸ್ಸಿನವರು. ನಾನೇಕೆ ಅವರ ಕಾಲಿಗೆ ಬೀಳಲಿ. ಅವರೇ ನನ್ನ ಕಾಲಿಗೆ ಬೀಳಲು ಬಂದಾಗ ತಡೆದಿದ್ದೇನೆ. ಆದರೆ, ಇದನ್ನು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.