ತುಮಕೂರು: ಜೆಡಿಸ್ ರೆಬಲ್ ಶಾಸಕ ಶ್ರೀನಿವಾಸ್ ಮತ್ತೆ ಪಕ್ಷದಲ್ಲಿ ಇರುವುದರಿಂದ ಪಕ್ಷ ಮತ್ತು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಶಾಸಕ ಸಾ. ರಾ. ಮಹೇಶ್ ಹೇಳಿದರು.
ತುಮಕೂರಿನಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಮನೆಗೆ ಭೇಟಿ ನೀಡಿದ್ದ ಅವರು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು, ನಮಗೆ ವಿಶ್ವಾಸವಿದೆ ಶ್ರೀನಿವಾಸ್ ಜೆಡಿಎಸ್ ಬಿಡುವುದಿಲ್ಲ. ಅವರು ಪಕ್ಷ ಬಿಟ್ಟರೆ ಇಬ್ಬರಿಗೂ ನಷ್ಟ. ಇದಕ್ಕೆಲ್ಲಾ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ಕುಮಾರಣ್ಣ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ವೈಯಕ್ತಿಕವಾಗಿ ಅವರ ಕುಟುಂಬದ ಜತೆ ಆತ್ಮೀಯ ಸಂಬಂಧ ಇದ್ದು, ನಾವಿಬ್ಬರೂ ಸ್ನೇಹಿತರು ಇರುವ ಕಾರಣ ಶ್ರೀನಿವಾಸ್ ಮನೆಗೆ ಭೇಟಿ ಕೊಟ್ಟಿದ್ದೇನೆ. ಇನ್ನುಳಿದ ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದರು.
ಶ್ರೀನಿವಾಸ್ ಮತ್ತು ನಾನು ಇಬ್ಬರೂ ಮೈಸೂರಿನಲ್ಲಿ ನಡೆದ ಕಾರ್ಯಾಕಾರಿ ಸಭೆಯಲ್ಲಿ ಕುಮಾರಣ್ಣ ಅವರನ್ನು ಭೇಟಿಯಾಗಿದ್ದು. ಆ ಬಳಿಕ ಕುಮಾರಣ್ಣನನ್ನು ಭೇಟಿ ಆಗಿಲ್ಲ ಎಂದರು.
ಇದನ್ನೂ ಓದಿ:ಅಂದು ಪಂಚರಾಜ್ಯ, ಇಂದು ಗುಜರಾಜ್ ಚುನಾವಣೆ, ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ