ETV Bharat / state

ಅಸ್ಪೃಶ್ಯತೆ ಆಚರಣೆ ವಿಚಾರ... ಗ್ರಾಮಸ್ಥರಿಗೆ ಕಾನೂನಿನ ಎಚ್ಚರಿಕೆ ನೀಡಿದ ಶೆಟ್ಟರ್​​​ - ಸಂಸದ ನಾರಾಯಣಸ್ವಾಮಿ

ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರು ದಲಿತರು ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶ ನಿರಾಕರಿಸಿದ ಘಟನನೆಯಿಂದಾಗಿ ಕೂಡಲೇ ಗ್ರಾಮಸ್ಥರು ಇದರ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್​ ಶೆಟ್ಟರ್​ ಎಚ್ಚರಿಕೆ ನೀಡಿದ್ದಾರೆ.

ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್
author img

By

Published : Sep 17, 2019, 2:56 PM IST

ತುಮಕೂರು: 12ನೇ ಶತಮಾನದಲ್ಲಿ ಬಸವಣ್ಣ ಅಸ್ಪೃಶ್ಯತೆ ಬಗ್ಗೆ ಖಂಡಿಸಿದ್ದಾರೆ. ಇದನ್ನು ಅರಿಯದ ಪೆಮ್ಮನಹಳ್ಳಿ ಗ್ರಾಮದ ಜನರು ಸಂಸದರು ದಲಿತ ಎಂಬ ಕಾರಣಕ್ಕೆ ಗ್ರಾಮದ ಪ್ರವೇಶ ನಿರಾಕರಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗೆ ಮುಂದುವರೆದರೆ ಕಾನೂನು ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್​ ಎಚ್ಚರಿಕೆ ನೀಡಿದ್ದಾರೆ.

ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್

ಸೆಪ್ಟಂಬರ್ 17ರಂದು ಚಿತ್ರದುರ್ಗ ಸಂಸದರಾದ ನಾರಾಯಣಸ್ವಾಮಿ ಅವರನ್ನು ದಲಿತ ಎಂಬ ಕಾರಣಕ್ಕೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಗ್ರಾಮಸ್ಥರು ಪ್ರವೇಶ ನಿರಾಕರಿಸಿದ್ದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೂಡಲೇ ಆ ಗ್ರಾಮದ ಮುಖಂಡರು ಒಂದು ತೀರ್ಮಾನಕ್ಕೆ ಬರಬೇಕು. ಸಂಸದ ನಾರಾಯಣಸ್ವಾಮಿ ಅವರನ್ನು ಹಟ್ಟಿಗೆ ಕರೆದು ಅವರಿಗೆ ಗೌರವ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ದೊಡ್ಡ ಪ್ರಮಾಣದ ಉದ್ಯೋಗ ಕಡಿತವಾಗಿಲ್ಲ: ಆರ್ಥಿಕ ಹಿಂಜರಿತ ಕೇವಲ ನಮ್ಮ ರಾಜ್ಯ ಅಥವಾ ದೇಶಕ್ಕೆ ಅಷ್ಟೆ ಅಲ್ಲ, ಇಡೀ ಪ್ರಪಂಚದಲ್ಲಿ ನಡೆಯುತ್ತಿದೆ. ಇದರಿಂದ ದೊಡ್ಡಮಟ್ಟದ ಉದ್ಯೋಗವೇನು ಕಡಿತವಾಗಿಲ್ಲ. ಅಧಿಕಾರಿಗಳ ಸಭೆ ಕರೆದು ಕೈಗಾರಿಕೆ ಮೇಲೆ ಆರ್ಥಿಕ ಹಿಂಜರಿತ ಹೇಗೆ ಆಗಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಹೇಳಿದ್ದೇನೆ ಎಂದರು.

Intro:ಸಂಸದರನ್ನು ಗೊಲ್ಲರಹಟ್ಟಿ ಗೆ ಪ್ರವೇಶ ನಿರಾಕರಿಸಿರುವುದು ಒಳ್ಳೆ ಬೆಳವಣಿಗೆಯಲ್ಲ..... ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ....

ತುಮಕೂರು
ಸಂಸದರನ್ನ ಗ್ರಾಮಕ್ಕೆ ಬಿಡದಿರುವುದು ಒಳ್ಳೆ ಬೆಳವಣಿಗೆಯಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರನ್ನು ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಿಸುವ ಘಟನೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಜ್ಯೋತಿ ಬದಲಾವಣೆ ಆಗುವಾಗ ಅಸ್ಪೃಶ್ಯತೆ ಹೋಗಬೇಕು. ಹನ್ನೆರಡನೇ ಶತಮಾನದಲ್ಲಿ ಇದನ್ನು ಬಸವಣ್ಣನವರ ಹೇಳಿದ್ದರು.
ಆದರೂ ಬ್ಯೂಟಿಗಳಿಗೆ ಆಚರಣೆ ನಡೆಯುತ್ತಿರುವುದನ್ನು ಖಂಡಿಸುತ್ತೇನೆ ಗ್ರಾಮಸ್ಥರು ವಿಚಾರ ಮಾಡಿ ಕೊಡಬೇಕು ಇದರಿಂದ ದೂರಗಾಮಿ ಪರಿಣಾಮ ಆಗುತ್ತದೆ ಗ್ರಾಮಸ್ಥರು ಕೂತ್ಕೊಂಡು ಅಂತ್ಯ ಹಾಡಬೇಕು. ನಾರಾಯಣಸ್ವಾಮಿ ಅವರನ್ನು ಹಟ್ಟಿಗೆ ಕರೆದುಕೊಂಡು ಬಂದು ಗೌರವ ಕೊಡಬೇಕು ಎಂದರು.

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.