ತುಮಕೂರು : ರಾಜ್ಯದಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವವರು ಸಮರ್ಥವಾಗಿ ನಡೆದುಕೊಳ್ಳಬೇಕೆಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಕೋವಿಡ್ ಕೇಂದ್ರದಲ್ಲಿ ಎಲ್ಲಾ ಅವ್ರೆ ಸ್ವಾಮಿ,ಏನ್ ಮಾಡೋದು ಎಲ್ಲಿ ನೋಡಿದ್ರು ಗಿಜಿ ಗಿಜಿ ಅಂತಾರೆ ಎಂದಿದ್ದಾರೆ.
ಸೋಮಣ್ಣ ಮಾತಿಗೆ ಸೊಗಡು ಶಿವಣ್ಣ ಸಾಥ್ ನೀಡಿದ್ದು, ಕುರಿ ಮಂದೆ ಇದ್ದಂಗೆ ಇದ್ದಾರೆ ಅಂತಾ ಧ್ವನಿಗೂಡಿಸಿದ್ದಾರೆ. ಬೆಂಗಳೂರಿನ 53 ವಾರ್ಡ್‍ನಲ್ಲಿ 26 ಕಡೆ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. 24x7 ಸಹಾಯವಾಣಿ, ಆ್ಯಂಬುಲೆನ್ಸ್, ಒಂದು ಆಕ್ಸಿಜನ್ ಆ್ಯಂಬುಲೆನ್ಸ್ ಇದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.