ತುಮಕೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗೂ ಈಗಲೂ ಇದೆ, ಮುಂದಕ್ಕೂ ಇರಲಿದೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಎಂಟು ಬಾರಿ ಎಂಎಲ್ಎ ಆಗಿದ್ದೇನೆ. ಆ ಭಾಗದ ಜನಪ್ರತಿನಿಧಿಯಾಗಿ ಹೇಳಬೇಕು ಹೇಳುತ್ತೇನೆ. ಸಿದ್ದರಾಮಯ್ಯ ಕಾಲದಲ್ಲಿ ಹಸು ಮತ್ತು ಹೋರಿಗಳಿಗಷ್ಟೇ ಪರಿಹಾರ ಕೊಟ್ಟರು. ಆದ್ರೆ ನಮ್ಮ ಕಡೆ ಇರುವ ಎಮ್ಮೆ ಮತ್ತು ಕೋಣಗಳಿಗೆ ಯಾವುದೇ ರೀತಿಯ ಪರಿಹಾರ ಕೊಡಲಿಲ್ಲ. ನನಗೂ ಸಿಎಂ ಆಗೋ ಆಸೆ ಇದೆ. ನಾನೂ ಯತ್ನಾಳ್ ಇಬ್ಬರೂ ಹಿರಿಯರು. ಆದ್ರೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.
"ಸಿಎಂ ಬಿಎಸ್ವೈ ನನಗೆ ವಿಶೇಷವಾದ ಜವಾಬ್ದಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಟ್ಟಿದ್ದಾರೆ. 4 ಕೋಟಿ ಜನರಿಗೆ ಆಹಾರ ಖಾತೆಯಲ್ಲಿ ಆಹಾರ ಯೋಜನೆಯಡಿ ಪಡಿತರ ನೀಡಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದರು.
"ಬಿಜೆಪಿಯಲ್ಲಿ 75 ವರ್ಷದವರೆಗೂ ಸಿಎಂ ಆಗೋ ಅವಶ್ಯಕತೆ ಇದೆ. ಜೀವನದಲ್ಲಿ ಸಿಎಂ ಆಗೋ ಆಸೆ ಎಲ್ಲರಿಗೂ ಇದೆ. ಸಿಎಂ ಆಗೋ ಆಸೆ ನನಗೂ ಇದೆ ಎಂದರು.