ತುಮಕೂರು: ಮನೆ ಮನೆಗಳಿಗೆ ಮೇಘ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಕ್ಕೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಚಾಲನೆ ನೀಡಿದರು.
26ನೇ ವಾರ್ಡ್ಗೆ ಸೇರುವ ಎಸ್.ಎಸ್. ಪುರಂನಲ್ಲಿನ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ವರ್ಷಗಳ ಕಾಲ ಹಂತ ಹಂತವಾಗಿ ಈ ಯೋಜನಾ ಕಾರ್ಯ ನಡೆಯಲಿದ್ದು, ಈಗ ಎಲ್ಲರೂ ಬಳಸುತ್ತಿರುವಂತಹ ಎಲ್ಪಿಜಿ ಗ್ಯಾಸ್ಗಿಂತ ಕಡಿಮೆ ಹಣದಲ್ಲಿ ಮೇಘ ಗ್ಯಾಸ್ ಸೌಲಭ್ಯ ದೊರೆಯಲಿದೆ. ಅನೇಕ ಯೋಜನೆಗಳ ಕಾಮಗಾರಿಗಳು ನಗರದಲ್ಲಿ ನಡೆಯುತ್ತಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.